ಯಾತ್ರೆಯ ಮೊದಲನೇಯ ದಿನ ನಮ್ಮ ನಕ್ಷೆಯ ಪ್ರಕಾರ ನಾವು ಮನೆಯಿಂದ ಸುಮಾರು ೬.೩೦ ಗೆ ತಿರುವನ್ನಾಮಲೈಕಡೆಗೆ ಪ್ರಯಾಣಮಾಡತೊಡಗಿದೆವು. ಬೆಂಗಳುರಿನಿಂದ ತಿರುವನ್ನಾಮಲೈ ಸುಮಾರು ೨೫೨ ಕಿ.ಮಿ ದೂರದಲ್ಲಿದ್ದು ಕೃಷ್ಣಗಿರಿಯ ಮೇಲೆ ಪ್ರಯಾಣಿಸಬೇಕು. ಅಲ್ಲೆ ಹೈವೇಲಿ ತಿರುವನ್ನಾಮಲೈಗೆ ದಾರಿ ಇದ್ದರು ತುಂಬ ಹದಗೆಟ್ಟ ಸ್ಥಿತಿಯಲ್ಲಿದೆಯಂತೆ ಹಾಗಾಗಿ ಬೇಗುರಿನ ಮೇಲೆ ಹೋಗೋದು ಸೂಕ್ತ. ಹೂ ಸುಮಾರು ೩೦ ಕಿ.ಮಿ ಜಾಸ್ತಿಯಾದರು ತಮ್ಮ ವಾಹನದ ಆರೋಗ್ಯಕ್ಕೂ ಹಾಗು ತಮ್ಮ ಸುಖಮಯ ಪ್ರಾಯಾಣಕ್ಕೂ ಸುತ್ತುಹಾಕೋದು ತಪ್ಪೇನು ಅಲ್ಲ ಬಿಡಿ.
ತಿರುವನ್ನಾಮಲೈನಲ್ಲಿ ಶ್ರೀ ಅರುಣಾಚಲೇಶ್ವರ ದೇವಸ್ಥಾನವಿದೆ. ಬೃಹತ್ ಗಾತ್ರದ ಗೋಪುರಗಳು ನಾಲ್ಕು ದಿಕ್ಕುಗಳಲ್ಲಿ ವಿರಾಜಮಾನವಗಿ ನಿಂತಿವೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ ಅತಿ ಸುಂದರವಾಗಿ ಕೆತ್ತಿರುವ ಬೃಹದಾಕಾರದ ಎತ್ತರ ಕಂಬಗಳು ಕೈಬೀಸಿ ಕರೆಯುವಂತೆ ಭಾವಿಸುತ್ತದೆ. ರೂ.ಇಪತ್ತುಗೆ ವಿಶೇಷ ದರ್ಶನದ ಟಿಕೇಟ್‍ಗಳು ದೊರೆಯುತ್ತವೆ. ದೇವಸ್ಥಾನ ಸುಮಾರು ೧೨.೩೦ ಗೆ ಮುಚ್ಚಿಬಿಡೋದ್ರಿಂದ ಆದಷ್ಟು ಶೀಘ್ರವಾಗಿ ತಲ್ಪೋದು ಉತ್ತಮ.
ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೆ ಶ್ರೀ ರಮನ ಮಹರ್ಷಿಗಳ ಆಶ್ರಮವಿದೆ. ಅವರು ಅಲ್ಲಿಯೇ ತಪಸ್ಸು ಮಾಡಿ ದೀಕ್ಷೆ ಪಡೆದದ್ದು. ಒಳಗೆ ಪ್ರವೇಶಿಸುತಿದ್ದಂತೆ ಅವರು ನೆಟ್ಟ ಮರವಿದ್ದು ಅದರ ಹಿಂಬಾಗದಲ್ಲಿ ಅವರ ಗುಡಿಯೊಂದಿದೆ. ಆಶ್ರಮದಲ್ಲಿ ಮಧ್ಯಾನ ಭೋಜನದ ವ್ಯವಸ್ಥೆಯೂ ಇದೆ. ಆದರೆ ಬೆ. ೧೧.೩೦ ಕ್ಕೆ ಊಟ ಹಾಕಿಬಿಡುತ್ತಾರೆ. ತುಂಬ ಸುಂದರವಾಗಿದೆ ಆಶ್ರಮ. ಎಷ್ಟೋ ವರ್ಷಗಳ ನಂತರ ದೊಡ್ಡ ಭಾವಿಯನ್ನು ನೋಡಿ ಸಂತಸಗೊಂಡಿದೆ. ಏನೇ ಮಿಸ್ಸ್ ಮಾಡ್ಕೊಂಡರು ಅಲ್ಲೇ ಮರದಮೇಲೆ ಕೂತು ಬಂದು ಹೋಗುವರನ್ನ ನೋಡ್ತಾ ಬೆಚ್ಚಿಬಿದ್ದು ಬೈಕೊಳ್ಳೊ ನವಿಲುಗಳನ್ನು ಮಿಸ್ಸ್ ಮಾಡ್ಕೋಬೇಡಿ.
ತಿರುವನ್ನಾಮಲೈನಲ್ಲಿ ಇವೆಲ್ಲದರ ಜೊತೆ, ಊರಿನ ಹೆಸರೇ ಸೂಚಿಸುವಂತೆ, ಮುಖ್ಯ ಆಕರ್ಷನೆಯೆಂದರೆ ಅಲ್ಲಿನ ’ಗಿರಿ’. ಈ ಗಿರಿಯನ್ನು ಸುತ್ತಲು ಹುಣ್ಣಿಮೆಯಂದು ನಾನಾ ಕಡೆಯಿಂದ ಜನ ಬರುತ್ತಿರುತ್ತಾರೆ. ಒಳ್ಳೆಯ ರಸ್ತೆ ಹಾಗು ಫ಼ುಟ್‍ಪಾತ್‍ಗಳನ್ನು ನಿರ್ಮಿಸಲಾಗಿದೆ. ಭಕ್ತಾದಿಗಳಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದರೆ ಅಲ್ಲಿನ ಮುನಿಸಿಪಾಲಿಟಿಯವರು. ಈ ಗಿರಿದರ್ಶನದ ದಾರಿ ಸುಮಾರು ೧೪ ಕಿ.ಮಿ ಇದ್ದು ಹಲವು ಶಿವನ ದೇವಸ್ಥಾನಗಳನ್ನು ಕಾಣಬಹುದು ಹಾಗು ಇತ್ತೀಚೆಗೆ ನಿತ್ಯಾನಂದ ಪೀಠಾರೋಹಣ ಮಾಡಬೇಕಿದ್ದ ಆಶ್ರಮವು ಸಿಗುತ್ತದೆ . ಹೀಗೆ ಗಿರಿದರ್ಶನ ಮಾಡುವ ದಾರಿಯಲ್ಲೆ ಹಲವು ಹೋಟೆಲ್‍ಗಳಿವೆ. ನಾವು ಅಲ್ಲಿಯೇ ದಾರಿಯಲ್ಲಿದ್ದ ಹೋಟೆಲ್ ರಾಮಕೃಷ್ಣದಲ್ಲಿ ಊಟಮುಗಿಸಿದೆವು. ಜಾಗಾ ಸ್ವಲ್ಪ ಇಕ್ಕಟ್ಟಾಗಿದ್ದರು ಊಟ ಚನ್ನಾಗಿಯೇ ಇತ್ತು. ನಮ್ಮ ಪಯಣ ಮುಂದೊರೆಯಿತು.
ಅಲ್ಲಿಂದ ನಾವು ಮದುರೈಗೆ ತೆರಳಬೇಕಿತ್ತು. ಹೇಗಿದ್ದರು ಟ್ರಿಚಿ (ತಿರುಚಿರಪಲ್ಲಿ ಅಂತಲೂ ಕರೆಯುತ್ತಾರೆ) ಮೇಲೆ ಹೋಗಬೇಕಿದ್ದರಿಂದ ಮಧ್ಯೆ ಶ್ರೀರಂಗಮ್‍ಗೆ ಹೋಗಿ ಶ್ರೀರಂಗನಾಥನ ದರ್ಶನ ಮಾಡೋಣ ಅಂತ ಯೋಚಿಸಿದ್ದೆವು. ತ್ರಿವನ್ನಾಮಲೈನಿಂದ ಟ್ರಿಚಿಗೆ ತಿರುಕೊವಲೂರ್ ಮೇಲೆ ಹೋಗಬೇಕು. ಹಾಗೆ ಮುಂದೊರೆದರೆ ಮದುರೈ-ಚೆನೈ ಹೈವೇ ಸಿಗುತ್ತದೆ. ಹೈವೇನಲ್ಲಿ ಸಾಗುತ್ತ ಟ್ರಿಚಿಗಿಂತ ಮೊದಲೇ ಶ್ರೀರಂಗಮ್‍ಗೆ ದಾರಿ ಸಿಗುತ್ತದೆ.
ಮುಂದಿನ ಕಥೆ ಮುಂದಿನ ಅಂಕಣದಲ್ಲಿ...........

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ