ಮಂಗಳವಾರ, ಮೇ 11, 2010

ಬೇಸಿಗೆ ಶಿಬಿರ

ಬೇಸಿಗೆ ಬಂತೆಂದರೆ ಮಕ್ಕಳಿಗೆಲ್ಲ ಖುಷಿನೋ ಖುಷಿ. ಆಟ, ಊಟ, ಓಟ ಎವೆಲ್ಲದರ ಜೊತೆಗೆ ಸ್ವಲ್ಪ ಕಲಿಕೆ. ಅಜ್ಜಿ ಮನೆ, ಗಲ್ಲಿ ಕ್ರಿಕೆಟ್ಟು, ಛೂ ಚಂಡು, ಗಿಲ್ಲಿ ದಾಂಡು, ಲಗೋರಿ ಜೊತೆಗೆ ಪಕ್ಕದ ಮನೆಯವರ ಕಿಟಕಿಯ ಗಾಜು ಒಡೆಯೋದಲ್ಲದೆ, ತಾತನ ಕಥೆ ಕೇಳೋದು, ಅಜ್ಜಿ ಮಾಡೋ ತಿನಿಸುಗಳನ್ನ ಶ್ರದ್ದೆಯಿಂದ ತಿನ್ನೋದು.
ಮಧ್ಯ ಸಿಕ್ಕೋ ಕೆಲವು ಘಂಟೆಗಳು ಶಿಬಿರದಲ್ಲಿ ಕಳೆಯೋದು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಅಂಗವಾದ Bangalore Science forum ರವರು ಪ್ರತೀ ವರ್ಷ ಇಂತಹದ್ದೆ ಶಿಬಿರವನ್ನು ನಡೆಸುತ್ತಾರೆ.ಸಾಮನ್ಯ ಒಂಭತ್ತು ಮತ್ತು ಹತ್ತನೆ ತರಗತಿಯ ವಿಧ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ವಿಜ್ಞಾನದಲ್ಲಿನ ಕೌತುಕಗಳ ಬಗ್ಗೆ ವಿವರಿಸಿ ಅವರಲ್ಲಿ ವಿಜ್ಞಾನದಕಡೆಗೆ ಒಲವು ಮೂಡಿಸಬೇಕೆಂಬುದು ಮುಖ್ಯ ಉದ್ದೇಶ.ಈ ಕೆಲ ವರ್ಷಗಳ ಹಿಂದೆ ನಾನು ಈ ಶಿಬಿರದಲ್ಲಿ ಭಾಗವಹಿಸಿದ್ದೆ.... ಅಹಾ ಆ ಅನುಭವವನ್ನೆ ವಿವರಿಸೋದಕ್ಕೆ ನಾನೊಂದು ೨೫ ಪೋಸ್ಟ್ ಗಳನ್ನ ಬರೆಯಬೇಕಾಗುತ್ತದೆ.
ಈ ವರ್ಷ ಕೂಡಾ ಭಗವಹಿಸುವ ಸದವಕಾಶ ಸಿಕ್ಕಿತ್ತು. ಆದರೆ ಒಂದೇ ವ್ಯತ್ಯಾಸ ಆ ಮಕ್ಕಳಿಗೆ ನನ್ನ ಕಾಲೇಜಿನ ಗುರುಗಳ ಜೊತೆಗೆ ಹೇಳಿಕೊಟ್ಟಿದ್ದು. ನನಗೆ ನಮ್ಮ ಗುರುಗಳು ಹೀಗಿದೆ ಅಂಥ ಹೇಳಿದ ಕೂಡಲೆ ನಾನು ನಿಮ್ಮ ಸಹಾಯಕ್ಕೆ ಬರುತ್ತೇನೆ ಅಂಥ ಖುಷಿಯಿಂದ ಹೇಳಿದೆ.ನಾವು ಸೋಮವಾರ ಅಲ್ಲಿಗೆ ಹೋಗಬೇಕಿತ್ತು ಹಾಗಾಗಿ ನಮ್ಮ ಗುರುಗಳು ನಾವು ಅಲ್ಲಿ ಹೇಳಿಕೊಡಬೇಕಾದದ್ದನ್ನು ಒಂದು ಸರ್ತಿ ಅಭ್ಯಾಸ ಮಾಡೋಣ ಅಂತ ಭಾನುವಾರ ಅವರ ಮನೆಗೆ ಕರೆದಿದ್ದರು. ಅಲ್ಲಿಗೆ ಅವರ ಪರಿಚಿತರೊಬ್ಬರು ಪ್ರಸಾದ ಅಂತ ನಾಗಮಂಗಲದಿಂದ ಬಂದು ನಮಗೆ ಒಂದಿಷ್ಟು ಮಾಡೆಲ್‍ಗಳನ್ನ ಹೇಳಿಕೊಡಬೇಗಗಿತ್ತು.
ಅವರು ಬಂದು ಮೂರು ಮಾಡೆಲ್‍ಗಳನ್ನು ಹೇಳಿಕೊಟ್ಟ ನಂತರ ನಾನು ನಮ್ಮ ಲಕ್ಷ್ಮಿ ಟೀಚರ್ರು ಗಾಂಧಿ ಬಜಾರಿಗೆ ಹೋಗಿ ಬೇಕಾದ ಒಂದಿಷ್ಟು ಸಾಮನುಗಳನ್ನ ತಂದೆವು.ಆಮೇಲೆ ಪ್ರಸಾದ ಸರ್ ತಂದುಕೊಟ್ಟಿದ್ದ ಕೆಲವು ಪ್ರಿಂಟ್ ಗಳನ್ನ  ಕೂತ್ಕೊಂಡು ಸಾಂಗವಾಗಿ ಕತ್ತರಿಸಿ ಮನೆಗೆ ಹೊರಟೆ.
ಮಾರನೇ ದಿನದ ಬೆಳಿಗ್ಗೆ ಅಲ್ಲಿ ಸಮಯಕ್ಕೆ ಸರಿಯಾಗಿ ಹೋದೆ. ಸುಮಾರು ೮೫ ವಿಧ್ಯಾರ್ಥಿಗಳಿದ್ದರು. ಅವರನ್ನೆಲ್ಲ ಒಂದುಕಡೆ ಕೂಡಿಸಿ ಅವರ ಕೈಯಲ್ಲಿ ನಾವು ಮಾಡಿಸಬೇಕು ಅಂದುಕೊಂಡಿದ್ದ ಎರಡು ಮಾಡೆಲ್ಲುಗಳನ್ನ ಮಾಡಿಸಿದೆವು.ಈ ಒಂದು ಕಾರ್ಯಾಗಾರದ ಮೂಲಕ ಬರಿ ಅಲ್ಲಿ ಬಂದಿದ್ದ ಮಕ್ಕಳಿಗಲ್ಲದೆ ನಮಗೂ ಕಲಿಯೋದಕ್ಕೆ ಒಂದು ಅವಕಾಶವಾಯ್ತು. ಅಷ್ಟು ಮಕ್ಕಳಿಗೆ ಹೇಳಿ ಕೊಡುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಬರಿ ಪಾಠ ಮಾಡುವುದಾದರೆ ಸುಲಭವಾಗುತಿತ್ತೋ ಏನೊ ,ಆದರೆ ಅವರ ಕೈಯಲ್ಲಿ ಆ ಮಾಡೆಲ್ಲುಗಳನ್ನು ಮಾಡಿಸುವುದು ಒಂದು ಸಾವಾಲೇ ಆಗಿತ್ತು ಮತ್ತು ಅಂಥ ಸಂಧರ್ಭಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಅನುಭವ ಸಿಕ್ಕಿದ್ದು ನಮಗೆ ಮುಂದೆ ಉಪಯುಕ್ತವಾಗುವುದು ಖಂಡಿತ..್
ಇಲ್ಲಿಗೆ ಶಿಬಿರ ಕಥೆ ಸಂಪೂರ್ಣ........ :)

ಭಾನುವಾರ, ಮೇ 9, 2010

Come Back!!!!!

ಕಳೆದ ಇಪ್ಪತ್ತು ದಿವಸಗಳು ತುಂಬ ಕಷ್ಟವಾಗಿದ್ದವು. ಅದೇನೋ ಓಡಾಟ ಅದೇನೋ ಆತಂಕ ಹಿಗೆ ಎಲ್ಲ ಭಾವನೆಗಳು ಒಂದಾಗಿ ನನ್ನನ್ನ ಆವರಿಸಿಕೊಂಡಿದ್ದವು. ಏನೆ ಹೇಳಿ ಈ ಹಾಳಾದ ಪರೀಕ್ಷೆ ಅಂದ್ರೇನೆ ಹಿಗೆ. ಅದೇನೇನು ಆಗತ್ತೋ ತಿಳಿಯೊದ್ದಿಲ್ಲ. ಅದಕ್ಕೆ ಬ್ಲಾಗನ್ನ ಅಪ್‍ಡೇಟ್ ಮಾಡಕ್ಕಗಿರಲಿಲ್ಲ.
ಇದೆಲ್ಲ ಜಂಜಾಟಗಲ ಮಧ್ಯ ಎಷ್ಟೋಂದು ಖುಷಿ ಕೊಡುವಂಥ ವಿಶಯಗಳು ನಡೆದಿವೆ. ನಿಧಾನವಗಿ ಒಂದೊಂದಾಗಿ ವಿವರಿಸ್ತೀನಿ.