ಸೋಮವಾರ, ಡಿಸೆಂಬರ್ 6, 2010

ರಜಾ ದಿನಗಳು

ಎಲ್ಲರು ದೀಪಾವಳಿಯ ಹಬ್ಬವನ್ನು ಸಂಭ್ರಮ-ಸಡಗರದಿಂದ ಹಾಗು ಎಚ್ಚರಿಕೆಯಿಂದ ಆಚರಿಸಿದ್ದಿರಿ ಅಂಥ ಭಾವಿಸುತಿದ್ದಿನಿ. ನನಿಗೆ ದೀಪಾವಳಿ ಹಬ್ಬದ ನಂತರವೆ ನನ್ನ ಪರೀಕ್ಷೆ ಆರಂಭವಾಯಿತು.
ಪರೀಕ್ಷೆ ನನ್ನ ದೀಪಾವಳಿಯ ಸಂಭ್ರಮಕ್ಕೆ ಅಡ್ಡಿ ಬರಲಿಲ್ಲ ಹಾಗಂತ ಡಬ್ಬ-ಡಬ್ಬ ಪಟಾಕಿಗಳನ್ನೇನು ಹೊಡಿಲಿಲ್ಲ ಆದರೆ ನನ್ನ ಮಾವನ ಮನೆಗೆ ಹೋಗಿ ಅಲ್ಲಿ ನನ್ನ ತಮ್ಮಂದಿರ ಜೊತೆ ಸಮಯ ಕಳೆದೆ.
ಪರೀಕ್ಷೆ ನಂತರ ಸುಮಾರು ಮೂರು ವಾರಗಳ ಕಾಲ ರಜೆ ಇತ್ತು. ಇನ್ನು ರಜೆ ಮುಗಿದಿಲ್ಲ. ಈ ರಜಾದಿವಸಗಳನ್ನ ಕಳೆಯುವುದು ಬಹಳ ಕಷ್ಟಕರ. ಆದರೆ ಈ ಸರ್ತಿ ಕಷ್ಟವಾಗಲಿಲ್ಲ.
ಬೆಂಗಳುರಿನಲ್ಲಿ ಪ್ರಪ್ರಥಮ ಭಾರಿಗೆ ಖಗೋಳವಿಜ್ಞನದ ಒಂದು ಯಾತ್ರೆ ನಡೆಯಿತು. ಇದು ಬೆಂಗಳುರಿನಲ್ಲಿರುವ ಹಲವಾರು ಸಂಶೋಧನಾ ಸಂಸ್ಥೆಗಳು ಆಯೋಜಿಸಿದ್ದವು. ಇದಕ್ಕೆ ’ಕಲ್ಪನೆಯ ಯಾತ್ರೆ’ಯೆಂದು ನಾಮಕರಣವನ್ನು ಮಾಡಿ ಸುಮಾರು ಹತ್ತು ದಿವಸಗಳಕಾಲ ನೆಹರು ತಾರಾಲಯದ ಆವರಣದಲ್ಲಿ ನಡೆಸಲಾಯ್ತು.
ನನಗೆ ಈ ’ಹಬ್ಬ’ದಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುವ ಅವಕಾಶ ವದಗಿ ಬಂದಿತ್ತು. ನಾನು ಅಲ್ಲಿ ಬೆಂಗಳುರು ಆಸ್ಟ್ರೊನೋಮಿಕಲ್ ಸೊಸೈಟಿಯ ಪರವಾಗಿ ಭಾಗವಹಿಸಿದ್ದೆ. ದಿನವಿಡಿ ಅಲ್ಲಿಗೆ ಬಂದ ಶಾಲ ಮಕ್ಕಳಿಗೆ ಹಾಗು ಜನ ಸಾಮಾನ್ಯರಿಗೆ ಖಗೋಳವಿಜ್ಞನದ ಬಗ್ಗೆ ಮಾಹಿತಯನ್ನ ಕೊಡೋದು ಹಾಗು ಅಲ್ಲಿ ಇದ್ದಂತ ಪೋಸ್ಟರ್‌ಗಳನ್ನು ವಿವರಿಸೋದು ನನ್ನ ಕರ್ತವ್ಯವಾಗಿತ್ತು.
ಈ ರೀತಿ ಹತ್ತು ದಿನಗಳು ಮಕ್ಕಳಿಗೆ ಹೇಳಿಕೊಡುವ ಪ್ರಯತ್ನದಲ್ಲಿ ನಾನು ಎಷ್ಟೋ ವಿಷಯಗಳನ್ನು ತಿಳಿಯಲು ಹಾಗು ಕಲಿಯಲು ಸಾಧ್ಯವಾಯ್ತು.
ಆದರೆ ಕಷ್ಟ ಪ್ರಾರಂಭವಾಗಿರೋದು ಈಗ. ಇನ್ನು ಒಂದು ವಾರ ರಜೆ ಹೇಗೆ ಕಳೆಯೋದು ಅಂಥ ಅರ್ಥವಾಗ್ತಿಲ್ಲ.

ಗುರುವಾರ, ನವೆಂಬರ್ 4, 2010

ನಮಸ್ಕಾರ!

ಎಲ್ಲರಿಗು ನಮಸ್ಕಾರ. ಹಲವು ದಿನಗಳ ನಂತರ ಬ್ಲಾಗ್‍ತ್ತಿದ್ದಿನಿ. ಇಷ್ಟು ತಿಂಗಳು ಹಲವಾರು ವಿಚಾರಗಳು ನಡೆದಿವೆ. ಸಧ್ಯಕ್ಕೆ ಎಲ್ಲರಿಗು ದೀಪಾವಲಿ ಶುಭಾಶಯಗಳು. :)
ನಡೆದ ಹಲವು ಕಾರ್ಯಕ್ರಮಗಳನ್ನು ನಿಧಾನವಾಗಿ ಬರೆದು ಪೋಸ್ಟ್ ಮಾಡ್ತಿನಿ.

ಬುಧವಾರ, ಜುಲೈ 7, 2010

ಹರಿಹರಪುರದತ್ತ ಪಯಣ

ಅಂತೂ ಯೋಗ ಪರೀಕ್ಷೆಯೊಂದಿಗೆ ನಮ್ಮ ಎರಡನೆ ಸೆಮಿಸ್ಟರು ಸಂಪೂರ್ಣವಾಯ್ತು. ಮುಂದೆ ಒಂದು ತಿಂಗಳು ಅಂದರೆ ಮೆ ೧೪ ಅರಿಂದ ಜೂನ್ ೧೪ ವರೆಗೂ ರಜೆ. ಏನೇ ಹೇಳಿ ರಜೆಗಳನ್ನು ಕಳೆಯುವುದು ಅತಿ ಕ್ಲಿಷ್ಟಕರವಾದ ಕೆಲಸ.
ನನ್ನ ರಜೆಯ ಶುರುವೇ ಪ್ರಯಾಣದಿಂದಾಯಿತು. ೧೬ ನೇ ತಾರೀಖಿನಿಂದ ೨೦ ತಾರೀಖಿನವರಗೂ ನಾನು ನನ್ನ ತಮ್ಮನ ಮುಂಜಿಯ ಪ್ರಯುಕ್ತ ಊರಿಗೆ ಹೋಗಬೇಕಿತ್ತು. ಊರು ಎಂದರೆ ನಮ್ಮ ಹುಟ್ಟೂರು ಅಂತಲ್ಲ. ನನ್ನ ಮಾವ, ಅವರ ಎರಡನೆಯ ಮಗನ ಮುಂಜಿಯನ್ನು ಹರಿಹರಪುರದ ಶ್ರೀ ಮಠದಲ್ಲಿ ಮಾಡಬೇಕೆಂದು ಸಂಕಲ್ಪಿಸಿದ್ದರು.
ಈ ಹರಿಹರಪುರ ಶೃಂಗೇರಿಯಿಂದ ಸುಮಾರು ೨೦ ಕಿಮಿ ದೂರದಲ್ಲಿದೆ. ಒಂದು ಪ್ರತೀತಿಯ ಪ್ರಕಾರ ಶ್ರೀ ಶಂಕರರು ಶಾರದಾ ಮಾತೆಯನ್ನು ಕರೆತರುವಾಗ, ಶಾರದಾಂಬೆಯು ಇಲ್ಲಿ ಮೊದಲು ನೆಲೆಸಿದಳಂತೆ. ನಂತರ ಶಂಕರರು ಪ್ರಾರ್ಥಿಸಿ ಶಾರದೆಯನ್ನು ಶೃಂಗೇರಿಯಲ್ಲಿ ನೆಲೆಸುವಂತೆ ಕೋರಿದರಂತೆ. ಹಾಗಾಗಿ ಇಲ್ಲಿಯೂ ಕೂಡ ಶಾರದಾಂಬೆಯು ನೆಲೆಸಿದ್ದಾಳೆ. ಮತ್ತೆಂದು ಪೌರಾಣಿಕ ಹಿನ್ನಲೆ ಉಂಟು ಈ ಕ್ಷೇತ್ರಕ್ಕೆ. ಹಿಂದಿ ದಕ್ಷ ಪ್ರಜಾಪತಿಯು ಯಜ್ಞ ಒಂದನ್ನ ಮಾಡುತ್ತಾನೆ, ಈ ಯಜ್ಞನಕ್ಕೆ ಎಲ್ಲ ದೇವಾನುದೇವತೆಗಳನ್ನು ಕರೆದಿರುತ್ತಾನೆ, ಶಿವನೊಬ್ಬನನ್ನು ಬಿಟ್ಟು. ನಂತರ ಶಿವನ ಪತ್ನಿ ದಾಕ್ಷಾಯಣಿಯು ಶಿವನ ಅನುಮತಿಯನ್ನು ಕೋರಿ ಯಜ್ಞಕ್ಕೆ ಹೋಗುತ್ತಾಳೆ. ಅಲ್ಲಿ ಅವಳ ತಂದೆ ಶಿವನನ್ನು ಅವಮಾನಿಸಿದ್ದಲ್ಲದೇ ಕರೆಯದೇ ನೀನೇಕೆ ಬಂದೆ ಎಂದು ಕೇಳುತ್ತಾನೆ. ಇದನ್ನು ಕೇಳಿ ದಾಕ್ಷಾಯಣಿ ಅದೇ ಹೋಮ ಕುಂಡದಲ್ಲಿ ಜಿಗಿದು ಪ್ರಾಣಬಿಡುತ್ತಾಳೆ. ಈ ಸುದ್ಧಿ ತಿಳಿದ ಪರಶಿವನು ಕೋಪದಿಂದ ತನ್ನ ಜಟೆಯಿಂದ ವೀರಭದ್ರನನ್ನು ಸೃಷ್ಟಿಸಿ ದಕ್ಷನ ತಲೆ ಕತ್ತರಿಸಲು ಕಳಿಸುತ್ತಾನೆ. ವೀರಭದ್ರನು ಹಾಗೆ ಮಾಡುತ್ತಾನೆ. ಎಲ್ಲ ದೇವತೆಗಳು ಭಯಭೀತರಾಗಿ ವಿಷ್ಣುವನ್ನು ಪ್ರಾಥಿಸುತ್ತಾರೆ. ನಂತರ ಹರಿಯು ಹರನ ಕೋಪವನ್ನು ಶಮನಗೊಳಿಸಿ ದಕ್ಷನಿಗೆ ಮೇಷದ ತಲೆ(ಕುರಿ) ಕೊಟ್ಟು ಕರುಣಿಸುತ್ತಾನೆ. ಇದೆಲ್ಲಾ ನಡೆದ ಪುಣ್ಯಸ್ಥಳ ಇದೇ ಎಂದು ಮತ್ತೊಂದು ಪ್ರತೀತಿ..
ಈ ಕ್ಷೇತ್ರವು ನಿಜವಾಗಿಯೂ ಶಾಂತವಾಗಿ ಮತ್ತು ಸುಂದರವಾಗಿ ಇದೆ. ತುಂಗಾ ತೀರದಲ್ಲಿ ಉಪಸ್ಥಿತವಿರುವ ಶ್ರೀ ಶಂಕರ ಸ್ಥಾಪಿತ ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ದೇವರು ಕೂಡ ಇದೆ. ಅಂತು ಒಂದು ಪುಣ್ಯ ಸ್ದಳದಲ್ಲಿ ಸುಮಾರು ಐದು ದಿವಸಗಳು ಬಲುಬೇಗ ಜಾರಿದವು.
ಮತ್ತಷ್ಟು ಕಥೆಯನ್ನು ಮುಂದಿನ ಭಾಗದಲ್ಲಿ ಕೊರಿತೀನಿ.. :)

ಶುಕ್ರವಾರ, ಜೂನ್ 11, 2010

ಯೋಗಾಭ್ಯಾಸ

ನಮ್ಮ ಕಾಲೇಜಿನವರು ವಿಧ್ಯಾರ್ಥಿಗಳಿಗೆ ಉಪಯೋಗವಾಗಲಿಯೆಂದು ಯೋಗ, ಧ್ಯಾನ, ಪ್ರಾಣಾಯಾಮ ಹಾಗು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ವಿಷಯಗಳನ್ನು ಒಳಗೊಂಡ ಮೈಂಡ್ ಮ್ಯಾನೇಜ್ಮೆಂಟ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ಎಂಬ ಒಂದು ವಿಷಯವನ್ನು ನಮ್ಮ ಪಠ್ಯ ವಿಷಯಗಳ ಜೊತೆಗೆ ಸೇರಿಸಿದ್ದಾರೆ. ಒಳ್ಳೆಯ ವಿಷಯವಾದರೂ, ಯಾರು ಅದಕ್ಕೆ ಹೆಚ್ಚು ಮಾನ್ಯತೆ ಕೊಟ್ಟಿದ್ದನ್ನು ನಾನಂತು ನೋಡಿಲ್ಲ.....ಇರಲಿ ನಾವು ಪಿ.ಸಿ.ಎಮ್ ಹುಡುಗುರು ತುಂಬಾ ಬುದ್ಧಿವಂತರಾದ್ದರಿಂದ ಈ ವಿಷಯಕ್ಕೆ ಸ್ವಲ್ಪ ಮಾನ್ಯತೆ ಕೊಟ್ಟು ಬೇರೆ ವಿಷಯಗಳ ಹಾಗೆ ನಮ್ಮ ಪರಿಪೂರ್ಣ ಪರಿಶ್ರಮ ಹಾಕೋಣ ಅಂತ ಅಂದುಕೊಂಡೆವು.
ನಮ್ಮ ಅದೃಷ್ಟವೆಂದರೆ ನಮ್ಮ ಸಹಪಾಠಿಯಾದ ಕುಸುಮಾಳ ತಾಯಿ ಯೋಗ ಹೇಳಿಕೊಡ್ತಾರೆ. ಹಾಗಾಗಿ ನಾವೆಲ್ಲರು ಅವಳ ಮನೆಗೆ ಹೋಗಿ ನಮ್ಮ ಪರೀಕ್ಷೆಗೆ ಬೇಕಾದ ಯೋಗಾಸನಗಳನ್ನ ಒಂದು ಸಲ ಮಾಡಿಯೇಬಿಡೋಣವೆಂದು ಹೋಗಿದ್ದೆವು. ಸರಿ ಅಕ್ಷಯಾಳಿಗೆ ದಾರಿ ತಿಳಿದಿದೆಯೆಂದು ತಪ್ಪಾಗಿ ಭಾವಿಸಿ ಜಯನಗರವೆಲ್ಲಾ ಒಂದು ಸುತ್ತುಹೊಡೆದು ಕೊನೆಗೆ ಅಶೋಕ ಸ್ಥಂಭದ ಹತ್ತಿರವಿರುವ ಅವಳ ಮನೆಗೆ ಹೋದೆವು..
ಅಲ್ಲಿ ಸಾಂಗವಾಗಿ ನಮಗಿದ್ದ ಎಲ್ಲ ಆಸನಗಳನ್ನು ಒಂದೆರಡು ಸಾರಿ ಕಲಿತೆವು.
ಮಜವೆಂದರೆ ನಾಗೆಂದ್ರ ಮತ್ತೆ ಕೌಶಿಕ್  ಕುಸುಮ ಮಾಡುತ್ತಿದ್ದ ಆಸನಗಳನ್ನೆಲ್ಲ ತಮ್ಮ ತಮ್ಮ ಕ್ಯಾಮೆರ ಫೋನಿನಲ್ಲಿ ಸೆರೆಹಿಡಿದಿದ್ದು.. ಇಷ್ಟು ಸಾರ್ತಿ ಮಾಡಿದಳಲ್ಲ ಮತ್ತೆ ಚಿತ್ರಣ ಯಾಕೆ ಅಂತ ಪ್ರಶ್ನಿಸಿದಕ್ಕೆ ಸಿಕ್ಕ ಉತ್ತರ " ಮನೆಗೆ ಹೋಗಿ ಎಷ್ಟು ಸಲ ಸಾಧ್ಯವೊ ಅಷ್ಟು ಸಲ ನೋಡಿ ಆಸನಗಳನ್ನ ಕರಗತ ಮಾಡ್ಕೊಬೇಕು"..ಕೇಳಿ ಎಲ್ಲರೂ ಆದಷ್ಟು ಜೋರಾಗಿ ನಕ್ಕು ಊಟಕ್ಕೆ ಹೊದೆವು..
ಆವತ್ತಿನ ದಿನ ಏಕಾದಶಿ, ನಮ್ಮ ಜೊತೆ ಬಂದಿದ್ದ ವಿರಜ ಒಂದು ಹನಿ ನೀರನ್ನೂ ಮುಟ್ಟಲಿಲ್ಲ..ಅವಳ ಅದೃಷ್ಟಕ್ಕೆ ಕುಸುಮಾಳ ತಾಯಿ ಈರುಳ್ಳಿ ಟೊಮಾಟೋ ಗೊಜ್ಜು ಮಾಡಿ ಚಪಾತಿ ಹಾಗು ಅನ್ನ ಸಾರನ್ನ ಮಾಡಿದ್ದರು.. ಅಂತು ಇಂತು ಬೈದು ಅವಳಿಗೆ ಮಾಜಾ ಕುಡಿಸಿ ನಾವುಗಳು ಊಟ ಮಾಡಿಕೊಂಡು ವಾಪಸ್ಸು ಬಂದೆವು..
ಮಾರನೇ ದಿವಸ ಕಾಲೇಜಿಗೆ ಹೋಗಿ ಎಲ್ಲರೂ ಅತ್ಯುತ್ತಮವಾಗಿ ಆಸನಗಳನ್ನು ಮಾಡಿದೆವು...

ಮಂಗಳವಾರ, ಮೇ 11, 2010

ಬೇಸಿಗೆ ಶಿಬಿರ

ಬೇಸಿಗೆ ಬಂತೆಂದರೆ ಮಕ್ಕಳಿಗೆಲ್ಲ ಖುಷಿನೋ ಖುಷಿ. ಆಟ, ಊಟ, ಓಟ ಎವೆಲ್ಲದರ ಜೊತೆಗೆ ಸ್ವಲ್ಪ ಕಲಿಕೆ. ಅಜ್ಜಿ ಮನೆ, ಗಲ್ಲಿ ಕ್ರಿಕೆಟ್ಟು, ಛೂ ಚಂಡು, ಗಿಲ್ಲಿ ದಾಂಡು, ಲಗೋರಿ ಜೊತೆಗೆ ಪಕ್ಕದ ಮನೆಯವರ ಕಿಟಕಿಯ ಗಾಜು ಒಡೆಯೋದಲ್ಲದೆ, ತಾತನ ಕಥೆ ಕೇಳೋದು, ಅಜ್ಜಿ ಮಾಡೋ ತಿನಿಸುಗಳನ್ನ ಶ್ರದ್ದೆಯಿಂದ ತಿನ್ನೋದು.
ಮಧ್ಯ ಸಿಕ್ಕೋ ಕೆಲವು ಘಂಟೆಗಳು ಶಿಬಿರದಲ್ಲಿ ಕಳೆಯೋದು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಅಂಗವಾದ Bangalore Science forum ರವರು ಪ್ರತೀ ವರ್ಷ ಇಂತಹದ್ದೆ ಶಿಬಿರವನ್ನು ನಡೆಸುತ್ತಾರೆ.ಸಾಮನ್ಯ ಒಂಭತ್ತು ಮತ್ತು ಹತ್ತನೆ ತರಗತಿಯ ವಿಧ್ಯಾರ್ಥಿಗಳಿಗೆ ಈ ಶಿಬಿರದಲ್ಲಿ ವಿಜ್ಞಾನದಲ್ಲಿನ ಕೌತುಕಗಳ ಬಗ್ಗೆ ವಿವರಿಸಿ ಅವರಲ್ಲಿ ವಿಜ್ಞಾನದಕಡೆಗೆ ಒಲವು ಮೂಡಿಸಬೇಕೆಂಬುದು ಮುಖ್ಯ ಉದ್ದೇಶ.ಈ ಕೆಲ ವರ್ಷಗಳ ಹಿಂದೆ ನಾನು ಈ ಶಿಬಿರದಲ್ಲಿ ಭಾಗವಹಿಸಿದ್ದೆ.... ಅಹಾ ಆ ಅನುಭವವನ್ನೆ ವಿವರಿಸೋದಕ್ಕೆ ನಾನೊಂದು ೨೫ ಪೋಸ್ಟ್ ಗಳನ್ನ ಬರೆಯಬೇಕಾಗುತ್ತದೆ.
ಈ ವರ್ಷ ಕೂಡಾ ಭಗವಹಿಸುವ ಸದವಕಾಶ ಸಿಕ್ಕಿತ್ತು. ಆದರೆ ಒಂದೇ ವ್ಯತ್ಯಾಸ ಆ ಮಕ್ಕಳಿಗೆ ನನ್ನ ಕಾಲೇಜಿನ ಗುರುಗಳ ಜೊತೆಗೆ ಹೇಳಿಕೊಟ್ಟಿದ್ದು. ನನಗೆ ನಮ್ಮ ಗುರುಗಳು ಹೀಗಿದೆ ಅಂಥ ಹೇಳಿದ ಕೂಡಲೆ ನಾನು ನಿಮ್ಮ ಸಹಾಯಕ್ಕೆ ಬರುತ್ತೇನೆ ಅಂಥ ಖುಷಿಯಿಂದ ಹೇಳಿದೆ.ನಾವು ಸೋಮವಾರ ಅಲ್ಲಿಗೆ ಹೋಗಬೇಕಿತ್ತು ಹಾಗಾಗಿ ನಮ್ಮ ಗುರುಗಳು ನಾವು ಅಲ್ಲಿ ಹೇಳಿಕೊಡಬೇಕಾದದ್ದನ್ನು ಒಂದು ಸರ್ತಿ ಅಭ್ಯಾಸ ಮಾಡೋಣ ಅಂತ ಭಾನುವಾರ ಅವರ ಮನೆಗೆ ಕರೆದಿದ್ದರು. ಅಲ್ಲಿಗೆ ಅವರ ಪರಿಚಿತರೊಬ್ಬರು ಪ್ರಸಾದ ಅಂತ ನಾಗಮಂಗಲದಿಂದ ಬಂದು ನಮಗೆ ಒಂದಿಷ್ಟು ಮಾಡೆಲ್‍ಗಳನ್ನ ಹೇಳಿಕೊಡಬೇಗಗಿತ್ತು.
ಅವರು ಬಂದು ಮೂರು ಮಾಡೆಲ್‍ಗಳನ್ನು ಹೇಳಿಕೊಟ್ಟ ನಂತರ ನಾನು ನಮ್ಮ ಲಕ್ಷ್ಮಿ ಟೀಚರ್ರು ಗಾಂಧಿ ಬಜಾರಿಗೆ ಹೋಗಿ ಬೇಕಾದ ಒಂದಿಷ್ಟು ಸಾಮನುಗಳನ್ನ ತಂದೆವು.ಆಮೇಲೆ ಪ್ರಸಾದ ಸರ್ ತಂದುಕೊಟ್ಟಿದ್ದ ಕೆಲವು ಪ್ರಿಂಟ್ ಗಳನ್ನ  ಕೂತ್ಕೊಂಡು ಸಾಂಗವಾಗಿ ಕತ್ತರಿಸಿ ಮನೆಗೆ ಹೊರಟೆ.
ಮಾರನೇ ದಿನದ ಬೆಳಿಗ್ಗೆ ಅಲ್ಲಿ ಸಮಯಕ್ಕೆ ಸರಿಯಾಗಿ ಹೋದೆ. ಸುಮಾರು ೮೫ ವಿಧ್ಯಾರ್ಥಿಗಳಿದ್ದರು. ಅವರನ್ನೆಲ್ಲ ಒಂದುಕಡೆ ಕೂಡಿಸಿ ಅವರ ಕೈಯಲ್ಲಿ ನಾವು ಮಾಡಿಸಬೇಕು ಅಂದುಕೊಂಡಿದ್ದ ಎರಡು ಮಾಡೆಲ್ಲುಗಳನ್ನ ಮಾಡಿಸಿದೆವು.ಈ ಒಂದು ಕಾರ್ಯಾಗಾರದ ಮೂಲಕ ಬರಿ ಅಲ್ಲಿ ಬಂದಿದ್ದ ಮಕ್ಕಳಿಗಲ್ಲದೆ ನಮಗೂ ಕಲಿಯೋದಕ್ಕೆ ಒಂದು ಅವಕಾಶವಾಯ್ತು. ಅಷ್ಟು ಮಕ್ಕಳಿಗೆ ಹೇಳಿ ಕೊಡುವುದು ಅಂದುಕೊಂಡಷ್ಟು ಸುಲಭವಿರಲಿಲ್ಲ. ಬರಿ ಪಾಠ ಮಾಡುವುದಾದರೆ ಸುಲಭವಾಗುತಿತ್ತೋ ಏನೊ ,ಆದರೆ ಅವರ ಕೈಯಲ್ಲಿ ಆ ಮಾಡೆಲ್ಲುಗಳನ್ನು ಮಾಡಿಸುವುದು ಒಂದು ಸಾವಾಲೇ ಆಗಿತ್ತು ಮತ್ತು ಅಂಥ ಸಂಧರ್ಭಗಳನ್ನು ಎದುರಿಸುವುದು ಹೇಗೆ ಎಂಬುದರ ಬಗ್ಗೆ ಅನುಭವ ಸಿಕ್ಕಿದ್ದು ನಮಗೆ ಮುಂದೆ ಉಪಯುಕ್ತವಾಗುವುದು ಖಂಡಿತ..್
ಇಲ್ಲಿಗೆ ಶಿಬಿರ ಕಥೆ ಸಂಪೂರ್ಣ........ :)

ಭಾನುವಾರ, ಮೇ 9, 2010

Come Back!!!!!

ಕಳೆದ ಇಪ್ಪತ್ತು ದಿವಸಗಳು ತುಂಬ ಕಷ್ಟವಾಗಿದ್ದವು. ಅದೇನೋ ಓಡಾಟ ಅದೇನೋ ಆತಂಕ ಹಿಗೆ ಎಲ್ಲ ಭಾವನೆಗಳು ಒಂದಾಗಿ ನನ್ನನ್ನ ಆವರಿಸಿಕೊಂಡಿದ್ದವು. ಏನೆ ಹೇಳಿ ಈ ಹಾಳಾದ ಪರೀಕ್ಷೆ ಅಂದ್ರೇನೆ ಹಿಗೆ. ಅದೇನೇನು ಆಗತ್ತೋ ತಿಳಿಯೊದ್ದಿಲ್ಲ. ಅದಕ್ಕೆ ಬ್ಲಾಗನ್ನ ಅಪ್‍ಡೇಟ್ ಮಾಡಕ್ಕಗಿರಲಿಲ್ಲ.
ಇದೆಲ್ಲ ಜಂಜಾಟಗಲ ಮಧ್ಯ ಎಷ್ಟೋಂದು ಖುಷಿ ಕೊಡುವಂಥ ವಿಶಯಗಳು ನಡೆದಿವೆ. ನಿಧಾನವಗಿ ಒಂದೊಂದಾಗಿ ವಿವರಿಸ್ತೀನಿ.

ಶನಿವಾರ, ಏಪ್ರಿಲ್ 17, 2010

ಪರೀಕ್ಷೆಗಳ ಸಮಯ

ನಮ್ಮ ವಿಧ್ಯಾರ್ಥಿಗಳ ಜೀವನವೆಲ್ಲ ಈ ಒಂದು ಕೆಲಸಕ್ಕೆ ಮುಡುಪಿಟ್ಟಿರುತ್ತೇವೆ. ಇಡೀ ವರ್ಷ ಅಂದ್ರೆ ಸುಮಾರು ಹತ್ತು ತಿಂಗಳ ಕಾಲ ಕಲೆತಿದ್ದೆಲ್ಲಾ ಕೇವಲ ಮೂರು ಘಂಟೆಗಳಲ್ಲಿ ಬರೆಯಬೇಕು. ಹೀಗೆ ಬರೆದಿದ್ದಕ್ಕೆ ನಮ್ಮ ಮಾನ್ಯ ಗುರುಗಳು, ಅಧ್ಯಾಪಕರುಗಳೆಲ್ಲರೂ ಪಾಪ ತಲೆ ಹೊಡಕೊಳ್ತಾ ಕರೆಕ್ಷನ್ನು ಮಾಡಿ ಅಂಕಗಳನ್ನ ಕೊಡ್ತಾರೆ. ಅವರಿಗೂ ಕಷ್ಟ ನಮಗೂ ಕಷ್ಟ.ತುಂಬಾನೆ ಕಷ್ಟವಾದ ಕೆಲಸ ಇಬ್ಬರದು.
ನನ್ನ ಅಭಿಪ್ರಾಯದಲ್ಲಿ ಈ ಪರೀಕ್ಷೆಗಳ ಪದ್ದತಿಯನ್ನೇ ತೆಗೆದು ಹಾಕಬೇಕು. ನಮ್ಮ ವಿಧ್ಯಾರ್ಥಿಗಳ ಪಾಂಡಿತ್ಯ ಅಥವಾ ನಾವು ಎಷ್ಟು ಕಲಿತಿದ್ದೇವೆ ಅನ್ನೋದನ್ನ ಅಳಿಯೋದಕ್ಕೆ ಬೇರೆ ರೀತಿಯ ಒಂದು ಮಾಪನವನ್ನು ಕಂಡುಹಿಡಿಯಬೇಕು.
ನಾವು ಕಲಿತಿರುವುದು ಇನ್ನೊಬ್ಬರಿಗೆ ಹೇಳಿಕೊಡೋದ್ರಿಂದ ನಮಗೂ ಉಪಯೋಗ ಹಾಗು ಹೇಳಿಕೊಟ್ಟವರಿಗೆ ಅರ್ಥವಾದರೆ ನಾವು ಆ ವಿಷಯವನ್ನು ತಕ್ಕಮಟ್ಟಿಗೆ ತಿಳಿದಿದ್ದೇವೆ ಅಂತ ಭಾಸವಗುತ್ತೆ. ಹೀಗೇನಾದರೂ ಮಾಡಬೆಕು.
ಈ ಪರೀಕ್ಷೆಯ ಪೆಡಂಭೂತ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಹುಡುಗರು ಸುಮ್ನೆ ಸಮಯ ಕಳೆಯುವುದಕ್ಕೆ ಇದೂ ಒಂದು ದಾರಿಯೆಂದು ಸಲೀಸಾಗಿ ತೆಗೆದುಕೊಳ್ಳುತಿದ್ದಾರೆ.
ನಾನು ಇಸ್ರೋ ರವರು ನಡೆಸಿದ ಒಂದು ಪರೀಕ್ಷೆ ಬರೆದೆ.ಅದು ರಾಷ್ಟೀಯ ಮಟ್ಟದ ಪರೀಕ್ಷೆ ಆಗಿತ್ತು.ನಾನು ಬರೆದದ್ದು ಸುಮ್ನೆಯೇ ನಲ್ಲ ಅವರು ನಡೆಸುವ ಬಿ.ಟೆಕ್ ಮಾಡಿ ಅಲ್ಲೇ ಕೆಲಸ ಮಾಡಬೇಕು ಅನ್ನೋದು ನನ್ನ ಕನಸು ಹಾಗು ಆಶಯವೂ ಹೌದು. ಅಲ್ಲಿ ನಮಗೆ ಹತ್ತರಿಂದ ಹನ್ನೆರಡು ಘಂಟೆಯವರೆಗು ಒಂದು ಪೇಪರ್ರು ಹಾಗು ಮತ್ತೊಂದು ಎರೆಡರಿಂದ ನಾಲ್ಕು ಘಂಟೆಗಳವರೆಗಿತ್ತು.ಆ ಮಧ್ಯೆ ಸಿಕ್ಕಿದ ಒಂದುವರೆ ಘಂಟೆಗಳ ಬಿಡುವಿನಲ್ಲಿ ಅಲ್ಲಿದ್ದ ಕೆಲವರನ್ನು ಮಾತನಾಡಿಸಿ ಸುಮಾರು ಹುಡುಗರು ಮಾತನಾಡೋದನ್ನ ಗಮನಿಸಿದೆ. ಅವರು ಹೇಳುವ ಪ್ರಕಾರ ಅವರು ಭಾರತದಲ್ಲಿ ನಡೆಯುವ ಈ ರೀತಿಯ ಪ್ರವೇಶ ಪರೀಕ್ಷೆಗಳನ್ನೆಲ್ಲ ಬರೆಯುತ್ತಿದ್ದರಂತೆ. ಯಾಕೆ ಹೀಗೆ ಅಂತ ಕೇಳಿದಕ್ಕೆ ಒಬ್ಬರು ಹೇಳಿದ್ದು ಹೀಗೆ "ಏನ್ ಹೀಗೆ ಕೆಳ್ತಿದ್ದಿರ. ಐಐಟಿ ಸಿಕ್ಲಿಲ್ಲ ಅಂದ್ರೆ ಐಐಎಸ್ಟಿ(ಅವತ್ತು ಬರೆದದ್ದು), ಇಲ್ಲ ಅಂದ್ರೆ ಸಿಈಟಿ ಇಂದ ಬಿ.ಈ...." ಹೀಗೆ ಹೇಳ್ಕೊತಾ ಹೋದರು.
ಏನೇ ಹೇಳಿ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಇರಲಿ ಇದ್ದೆಲ್ಲವನ್ನು ನೋಡಿ ಈ ಪರೀಕ್ಷ ಪದ್ಧತಿ ತೆಗೆದು ಹಾಕಬೇಕನಿಸಿ ಬರೆದೆ....ಎಲ್ಲರು ಒಪ್ತಿರಾ ಅಂತ ನಂಬಿದ್ದೇನೆ.

ಮಂಗಳವಾರ, ಏಪ್ರಿಲ್ 13, 2010

ಜಾತ್ರೆಯ ದಿವಸ

ಇವತ್ತು ನಮ್ಮ ಕಾಲೇಜಿನಲ್ಲಿ ಕೊನೆಯ semester studentsಗೆ Graduation Day. ಅಂದರೆ studentsಗೆ ತಾವುಗಳೆಲ್ಲರು ಈ ಮೂರು ವರ್ಷ ಕೊಟ್ಟಿದ್ದ ಕಷ್ಟಗಳೆಲ್ಲದಕ್ಕೂ ತೆರೆ ಬಿತ್ತು ಅಂತ ಹೇಳೋದಕ್ಕೆ ಕಾಲೇಜಿನ managementರವರು ಮಾಡುವ ಕಾರ್ಯಕ್ರಮ.
ಅದಕ್ಕೆ ಹುಡುಗರೆಲ್ಲರೂ ಸೂಟು ಬೂಟಿನಲ್ಲೂ ಹಾಗು ಹುಡುಗಿಯರು ಸೀರೆಯಲ್ಲೂ ಬರಬೇಕಾಗಿ ಸವಿನಯ ಪ್ರಾರ್ಥನೆ ಮಾಡಲಾಗಿತ್ತು.
ನಾವು ಮೊದಲನೆಯ ವರ್ಷದವರು ಸುಮ್ಮನೆ ಆ ಕಾರ್ಯಕ್ರಮ ಹೇಗಿರತ್ತೊ ಏನೋ ಎಂದು ತಿಳೆದುಕೊಳ್ಳಲು ಹೋಗಿದ್ದೆವು.
ನಾವು ಕಾಲೇಜು ತಲುಪಿದಾಗ ಸುಮಾರು ಹತ್ತುವರೆ ಘಂಟೆಯಾಗಿತ್ತು. ಫೋಟೋ ತೆಗೆಯುವ/ ತೆಗೆಸಿಕೊಳ್ಳುವ ಕೈಂಕರ್ಯ ನಡೆಯುತಿತ್ತು.  ಅಲ್ಲಿದ್ದವರನ್ನ ನೋಡಿ ನನಗೆ ನಮ್ಮ ಊರಿನ ಜಾತ್ರೆ ನೆನಪಾಯಿತು. :)
ಸರಿ ಅಲ್ಲಿ ಹೋಗಿ ಮಾಡಿದ್ದೇನಪ್ಪಾ ಅಂದರೆ ಕಣ್ಣು ತಂಪು ಮಾಡಿಕೊಂಡಿದಷ್ಟೆ. ಏಕೆಂದರೆ ನಮಗಲ್ಲಿ ಬೇರೆ ಏನು ಕೆಲಸವಿರಲಿಲ್ಲ. ನಮ್ಮನ್ನ ಯಾವುದೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಲಿ ಅಥವಾ ಬೇರೆ ಕೆಲಸಗಳಿಗಾಗಲೀ ನಿಯೋಜಿಸಿರಲಿಲ್ಲ
ಬಡಪಾಯಿಗಳು ನಾವು ಇನ್ನೇನು ಮಾಡೇವು ?!
ಈ ಕಣ್ಣು ತಂಪು ಮಾಡಿಕೊಳ್ಳುವಿಕೆಯ ಮಧ್ಯದಲ್ಲಿ ಆವಾಗಾವಗ ಸ್ಟೇಜಿನ ಮೆಲೆ ನಡೆಯುತ್ತಿದ್ದ ಕಾರ್ಯಕ್ರಮ ನೋಡುತ್ತಾ  ಶಿಳ್ಳೆ ಹೊಡಿತಾಯಿದ್ದೆ...
ಇದೆಲ್ಲ ಮುಗಿಸಿ ಸುಮಾರು ಒಂದುವರೆ ಹೊತ್ತಿಗೆ ಹೊರೆಟು ಮನೆಗೆ ಬಂದೆ. ಬರೋ ಹೊತ್ತಿಗೆ ಸ್ವಲ್ಪ ಜ್ವರ ಬಂದಂಗಿತ್ತು. ಹಾಗಾಗಿ ಒಂದೇ ಒಂದು ರೊಟ್ಟಿ ತಿಂದು ಮಾತ್ರೆ ನುಂಗಿ ಮಲಗಿದೆ. ನಂತರ ಎದ್ದು ಮೈಲ್ಸ್ ನೋಡೋಣಾ ಅಂತ ಕಂಪ್ಯೂಟರ್ ಮುಂದೆ ಕೂತೆ, ಸುಮ್ನೆ ಇರ್ಲಿ ದಾಖಲೆ ಗೆ ಅಂತ ಇದನ್ನು ಬರೆದೆ.

ಶನಿವಾರ, ಏಪ್ರಿಲ್ 10, 2010

ಚಿತ್ರ ವಿಚಿತ್ರ ದಿನ

ಈ ದಿನ ಸೂರ್ಯಹುಟ್ಟಿದ ಕ್ಷಣದಿಂದಲೇ ವಿಚಿತ್ರಗಳ ಸರಮಾಲೆ ಶುರುವಾಯಿತು. ಎಲ್ಲವನ್ನು ಹೇಳೋದಿಲ್ಲ, ತುಂಬ ಕೊರಿತಾನೆ ಅನ್ನಿಸಬಹುದು..

ಮೊದಲನೇ ವಿಚಿತ್ರವೆಂದರೆ, ಯಾವತ್ತು ಮೆಸೇಜೇ ಮಾಡದ ನನ್ನೆ ಶಾಲೆಯ ಸ್ನೇಹಿತೆ ಶುಭೋದಯದ ಮೆಸೇಜನ್ನ ಕಳಿಸಿದ್ದಳು.
ಇವತ್ತು physics practical mock test ಬೇರೆ ಇತ್ತು. ಅದಕ್ಕೆ ಒಂದು ಬಾರಿ revise ಮಾಡೋಣ ಅಂದುಕೊಂಡ ಕ್ಷಣವೇ ನನ್ನ ಮೃದಂಗದ ಗುರುಗಳು ಫೋನ್ ಮಾಡಿ ಪಾಠಕ್ಕೆ ಬಾಯೆಂದರು. ಅಲ್ಲಿ ಯಾವತ್ತು ಸಿಗದ ನನ್ನ ಮಾವ ಹಾಗು ನನ್ನ ತಮ್ಮ ಸಿಕ್ಕಿದರು.
ಮನೆಗೆ ಮರಳಿ ಬರುವ ಹೊತ್ತಿಗೆ ಲೇಟಾಗಿತ್ತು .ಹಾಗಾಗಿ ತಿಂಡಿ ತಿಂದು ಕಾಲೇಜಿಗೆ ಹೊರಟೆ. ದಾರಿಯಲ್ಲಿ ಅಕ್ಷಯ ಸಿಕ್ಕಿ ಇಬ್ಬರು ಒಟ್ಟಿಗೆ ಪರೀಕ್ಷೆಯ ಬಗ್ಗೆ ಮಾತನಾಡಿಕೊಂಡು ಅಂತು ಇಂತು ಕಾಲೇಜಿಗೆ ಬಂದ್ವಿ.
physics lab ನಲ್ಲಿ ಪರೀಕ್ಷೆ ಶುರುವಾಯಿತು ನಮ್ಮೆಲ್ಲರ "ನೆಚ್ಚಿನ" ಗುರುಗಳ ನೇತೃತ್ವದಲ್ಲಿ. ಎಲ್ಲ ಮುಗಿದ ಮೆಲೆ ನಮ್ಮ ಗುರುಗಳು ಯಾವುದೇ ಕಾರಣವಿಲ್ಲದೆ ಒಂದಿಷ್ಟು ಅಂಕಗಳನ್ನ ಕಳೆದು ನಿನಗೆ ಇಷ್ಟು ಸಾಕು ಹೋಗಿ ಬಾಪ್ಪ ಅಂತ ಕಳಿಸಿಬಿಟ್ಟರು.
ಸರಿ ಅದಾಯ್ತು ಅಂದುಕೊಂಡು ಕೆಮಿಸ್ಟ್ರಿ ಕ್ಲಾಸಿಗೆ ಹೋಗೋಣ ಅಂದುಕೊಂಡರೆ, ನಮ್ಮ ಗುರುಗಳು ಕರೆದು ಇದ್ದವರಿಗೆಲ್ಲ atttendance ಕೊಟ್ಟು ಮನೆಗೆ ಹೋಗಿಯೆಂದರು.
ಊಟ ಮುಗಿಸಿ ಮನೆಗೆ ನಾನು, ಅಕ್ಷಯ, ಪ್ರಿಯಾಂಕ, ಕೈ ಮುರೆದುಕೊಂಡಿರುವ ವಿರಜ ಮತ್ತು ಇನ್ನೊಬ್ಬರು ಹೊರೆಟವು. ಈ ಕೆಲವು ದಿನಗಳಿಂದ ಮಾತನಾಡಿಸದ ವಿಶೇಷ ವ್ಯಕ್ತಿ ನಮ್ಮೆಲ್ಲರೊಂದಿಗೆ ಮಾತಾಡಿದ್ದಲ್ಲದೆ ನಮ್ಮೆಲರಿಗೂ ಕಡಲೆಕಾಯಿ ಕೊಡಿಸಿದರು ಹಾgU ಎ.ಸಿ. ಬಸ್ಸಿನಲ್ಲಿ ನಮ್ಮೆಲ್ಲರಿಗೂ ಟಿಕೆಟ್ಟುಕೊಂಡರು.
ಇದೆಲ್ಲ ಆದ ಮೇಲೆ ನಾನು ಈ ಬ್ಲಾಗನ್ನು ಬರೆದಿದ್ದೀನಿ..

ಬ್ಲಾಗಿನ ಚರಿತ್ರೆ

ನಾನು ನನ್ನ ಜೀವನದಲ್ಲಿ ಎಷ್ಟೋ ವಿಷಯಗಳಿಗೆ ಆಶ್ಚರ್ಯ ಪಟ್ಟಿದ್ದೇನೆ. ಆ ಎಲ್ಲ ಅನುಭವಗಳನ್ನ ಈ ಬ್ಲಾಗಿನಲ್ಲಿ ಹಾಕಂತ ನನ್ನ ಸ್ನೇಹಿತರು ಹಾಗೂ ನನ್ನ  ಗುರುಗಳು ತುಂಬಾ ಸಲಹೆಗಳನ್ನು ಕೊಟ್ಟಿದ್ದಾರೆ.
ಇವರೆಲ್ಲರ ಸಲಹೆಗಳಿಂದಲೂ ಹಾಗೂ ನನ್ನ ಕ್ರಿಯಾಶೀಲತೆಯಿಂದಲೂ  ನನ್ನ ದಿನದ ಕಾಂಡವನ್ನು,  ಕರ್ಮಕಾಂಡವನ್ನು ಇಲ್ಲಿ ಪೋಸ್ಟ್ ಮಾಡ್ತೀನಿ.
ತಪ್ಪುಗಳಿದ್ದರೆ ಕ್ಷಮಿಸಿ ಸರಿತಿದ್ದಿ....