ಶುಕ್ರವಾರ, ಜೂನ್ 22, 2012

ಪ್ರವಾಸ - ೨

ಶ್ರೀರಂಗನಾಥಸ್ವಾಮಿಯು ಮುಖ್ಯವಾಗಿ ಮೂರು ಜಾಗಗಳಲ್ಲಿ ನೆಲಸಿದ್ದಾನೆ ಎಂದು ಪ್ರತೀತಿ. ಆದಿ, ಮಧ್ಯ ಹಾಗು ಅಂತ್ಯ ರಂಗನಾಥ ಎಂದೇ ಪ್ರಸಿದ್ಧಿ. ಇವೆಲ್ಲ ದೀವಸ್ಥಾನಗಳು ನಮ್ಮ ಕಾವೇರಿ ನದಿ ದಡದಲ್ಲೇ ಇವೆ. ಮೊದಲನೆಯದು ಶಿಂಶದಲ್ಲಿ, ಇನ್ನು ಪ್ರತ್ಯೇಕವಾಗಿ ಹೇಳೋದಾದರೆ ಶಿವಾನಸಮುದ್ರದಲ್ಲಿ ಆದಿ ರಂಗನಾಥನಾಗಿ , ಮತ್ತೊಂದು ನಮ್ಮ ಮೈಸೂರಿಗೆ ಹತ್ತಿರದಲ್ಲಿರುವ ಶ್ರೀರಂಗಪಟ್ಟಣದ್ದಲ್ಲಿ ಮಧ್ಯ ರಂಗನಾಥನಾಗಿ  ಹಾಗು ಕೊನೇಯದು ಅಂತ್ಯ ರಂಗನಾಥನಾಗಿ  ಶ್ರೀರಂಗಮ್‍ನಲ್ಲಿ ನೆಲಸಿದ್ದಾನೆ.

ಆದರೇ ಇಲ್ಲಿನ ದೇವಸ್ಥಾನಗಳಂತೆ ಎಲ್ಲಾ ಸಮದಲ್ಲಿ ದರ್ಶನವಿರೋದಿಲ್ಲ ಶ್ರೀರಂಗಮ್‍ನಲ್ಲಿ. ಬೆಳಗ್ಗೆ ೬ ರಿಂದ ೭, ಸಂಜೆ ೬ ರಿಂದ ೭ ದರ್ಶನವಿರೊಲ್ಲ. ಆಗ ದೆವರಿಗೆ ತಿರುಮಜ್ಜನಮ್ ನಡೆಯುತ್ತದೆ. ಮಧ್ಯಾನ ೧೨.೩೦ ಯಿಂದ ೩.೩೦ ವರೆಗೆ ಮುಚ್ಚಿರತ್ತೆ ಹಾಗು ರಾತ್ರಿ ೯ ಘಂಟೆಗೆ ದೇವಸ್ಥಾನ ಮುಚ್ಚಲಾಗಿರುತ್ತದೆ.

ಸಾಯಂಕಾಲವಾದ್ದರಿಂದ ಕಾಫ಼ೀಗೆ ಊರೆಲ್ಲ ಹುಡುಕಿದೆವು. ಅಲ್ಲೆ ಉತ್ತರ ಗೋಪುರದ ಹತ್ತಿರ ಒಂದು ಪೆಟ್ಟಿ ಅಂಗಡಿಯಲ್ಲಿ ಆಹ್ಲಾದಕರವಾದ ಕಾಫ಼ೀ ದೊರಕಿತು. ಆಹಾ ಅಂಥಾ ಕಾಫ಼ೀನ ಇತ್ತೀಚೆಗೆ ನಾ ಕುಡಿದಿರಲಿಲ್ಲ. ಸ್ವಲ್ಪ ಜೀವ ಬಂದಂತಾಯಿತು. ಅಲ್ಲಿಂದ ಮತ್ತೆ ಮದುರೈ ಹೈವೇಗೆ ಬರೊಕ್ಕೆ ತುಂಬ ಪರದಾಡಬೇಕಯ್ತು.

ತಮಿಳು ನಾಡಿಗೆ ನೀವೇ ಹೋಗಬೇಕಿದ್ದರೆ ದಯವಿಟ್ಟು ನಿಮ್ಮೊಂದಿಗೆ ತಮಿಳು ಓದಕ್ಕೆ ಬರೋರನ್ನ ಕರೆದುಕೊಂಡು ಹೋಗಿ. ಕನಿಷ್ಠ ತಮಿಳು ಮಾತಾಡಿ ಅರ್ಥ ಮಾಡ್ಕೊಳಕ್ಕಾಗವರನ್ನ ಜೊತೆ ಕರೆದುಕೊಂಡು ಹೋಗಿ. ಅಲ್ಲಿ ಎಲ್ಲ ಫಲಕಗಳನ್ನ ತಮಿಳಿನಲ್ಲೆ ಹಾಕಿರುತ್ತಾರೆ ದಾರಿ ಕಳೆದುಕೊಳ್ಳೋದು ತುಂಬ ಸುಲಭ. ನೀವು ದಾರಿ ಕೇಳಿದರು ಆಟೋ ಚಾಲಕರನ್ನೋ ಅಥವ ಅಂಗಡಿಯವರನ್ನ ಕೇಳಿ ಸ್ವಲ್ಪ ಅರ್ಥವತ್ತಾಗಿ ಹೇಳುತ್ತಾರೆ. ಇಲ್ಲ ಕೇಳಿದವರು ’ನೇರ ಪೋಯ್ಯ’ ಅಂತ್ತಾರೆ. ದಾರಿ ಹೇಗೇ ಇರಲಿ ಸೀದಾ ಹೋಗು ಎಂದು ಅರ್ಥ. ತುಂಬ ಕಷ್ಟವಾಗುತ್ತದೆ ಭಾಷೆಬರದಿದ್ದರೆ. ಇದು ನನ್ನ ವಯಕ್ತಿಕ ಅನುಭವ. ನನ್ನ ತಂದೆಗೆ ತಮಿಳು ತುಂಬಾ ಚನ್ನಾಗಿ ಬರೋದರಿಂದ ನಾವು ಹೇಗೋ ಸಂಬಾಲಿಸಿಬಿತ್ವಿ.

ಹಾಗೂ ಹೀಗೂ ಮದುರೈ ಹೈವೇಗೆ ಬಂದು ಮದುರೈ ತಲುಪಿದೆವು. ಮದುರೈನಲ್ಲಿ ರೈಲ್ವೇ ಸ್ಟೇಷನ್ ಹತ್ತಿರ ಹೋಟೆಲ್ ಸಬರೀಶ್ ಇದೆ. ಅಲ್ಲಿ ಯಾವ ಆಟೋದವರನ್ನ ಕೇಳಿದರೂ ಹೇಳುತ್ತಾರೆ. ಅಲ್ಲಿಯೇ ಪಕ್ಕದಲ್ಲಿ ಹೋಟೆಲ್ ಕೀರ್ಥಿ ಅನ್ನೊ ಲಾಡ್ಜಿನಲ್ಲಿ ನಾವು ರಾತ್ರಿ ಉಳಿದುಕೊಂಡೆವು. ಹೋಟೆಲ್ ಕೀರ್ಥಿಯಲ್ಲಿ ಭೋಜನದ ವ್ಯವಸ್ತೆ ಇಲ್ಲ ಅದು ಬರಿ ಲಾಡ್ಜ್ ಮಾತ್ರ ಆದರೆ ಬೆಳಗ್ಗಿನ ತಿಂಡು ಕಾಮ್‍ಪ್ಲಿಮೆಂಟರೀ ಅಂತ ಕೊಡಲಾಗುತ್ತದೆ ಅಷ್ಟೆ.  ಬೇರೆ ತಿಂಡಿಗಳಿಗೆ ಪಕ್ಕದಲ್ಲೇ ಇರುವ ಹೋಟೆಲ್ ಶಬರೀಶ್‍ಗೆ ಹೋಗಬಹುದು.

ಮುಂದೊರೀಸೂತ್ತೇನೆ.........

ಭಾನುವಾರ, ಜೂನ್ 3, 2012

ಪ್ರವಾಸ - ೧

ಯಾತ್ರೆಯ ಮೊದಲನೇಯ ದಿನ ನಮ್ಮ ನಕ್ಷೆಯ ಪ್ರಕಾರ ನಾವು ಮನೆಯಿಂದ ಸುಮಾರು ೬.೩೦ ಗೆ ತಿರುವನ್ನಾಮಲೈಕಡೆಗೆ ಪ್ರಯಾಣಮಾಡತೊಡಗಿದೆವು. ಬೆಂಗಳುರಿನಿಂದ ತಿರುವನ್ನಾಮಲೈ ಸುಮಾರು ೨೫೨ ಕಿ.ಮಿ ದೂರದಲ್ಲಿದ್ದು ಕೃಷ್ಣಗಿರಿಯ ಮೇಲೆ ಪ್ರಯಾಣಿಸಬೇಕು. ಅಲ್ಲೆ ಹೈವೇಲಿ ತಿರುವನ್ನಾಮಲೈಗೆ ದಾರಿ ಇದ್ದರು ತುಂಬ ಹದಗೆಟ್ಟ ಸ್ಥಿತಿಯಲ್ಲಿದೆಯಂತೆ ಹಾಗಾಗಿ ಬೇಗುರಿನ ಮೇಲೆ ಹೋಗೋದು ಸೂಕ್ತ. ಹೂ ಸುಮಾರು ೩೦ ಕಿ.ಮಿ ಜಾಸ್ತಿಯಾದರು ತಮ್ಮ ವಾಹನದ ಆರೋಗ್ಯಕ್ಕೂ ಹಾಗು ತಮ್ಮ ಸುಖಮಯ ಪ್ರಾಯಾಣಕ್ಕೂ ಸುತ್ತುಹಾಕೋದು ತಪ್ಪೇನು ಅಲ್ಲ ಬಿಡಿ.

ತಿರುವನ್ನಾಮಲೈನಲ್ಲಿ ಶ್ರೀ ಅರುಣಾಚಲೇಶ್ವರ ದೇವಸ್ಥಾನವಿದೆ. ಬೃಹತ್ ಗಾತ್ರದ ಗೋಪುರಗಳು ನಾಲ್ಕು ದಿಕ್ಕುಗಳಲ್ಲಿ ವಿರಾಜಮಾನವಗಿ ನಿಂತಿವೆ. ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ ಅತಿ ಸುಂದರವಾಗಿ ಕೆತ್ತಿರುವ ಬೃಹದಾಕಾರದ ಎತ್ತರ ಕಂಬಗಳು ಕೈಬೀಸಿ ಕರೆಯುವಂತೆ ಭಾವಿಸುತ್ತದೆ. ರೂ.ಇಪತ್ತುಗೆ ವಿಶೇಷ ದರ್ಶನದ ಟಿಕೇಟ್‍ಗಳು ದೊರೆಯುತ್ತವೆ. ದೇವಸ್ಥಾನ ಸುಮಾರು ೧೨.೩೦ ಗೆ ಮುಚ್ಚಿಬಿಡೋದ್ರಿಂದ ಆದಷ್ಟು ಶೀಘ್ರವಾಗಿ ತಲ್ಪೋದು ಉತ್ತಮ.

ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲೆ ಶ್ರೀ ರಮನ ಮಹರ್ಷಿಗಳ ಆಶ್ರಮವಿದೆ. ಅವರು ಅಲ್ಲಿಯೇ ತಪಸ್ಸು ಮಾಡಿ ದೀಕ್ಷೆ ಪಡೆದದ್ದು. ಒಳಗೆ ಪ್ರವೇಶಿಸುತಿದ್ದಂತೆ ಅವರು ನೆಟ್ಟ ಮರವಿದ್ದು ಅದರ ಹಿಂಬಾಗದಲ್ಲಿ ಅವರ ಗುಡಿಯೊಂದಿದೆ. ಆಶ್ರಮದಲ್ಲಿ ಮಧ್ಯಾನ ಭೋಜನದ ವ್ಯವಸ್ಥೆಯೂ ಇದೆ. ಆದರೆ ಬೆ. ೧೧.೩೦ ಕ್ಕೆ ಊಟ ಹಾಕಿಬಿಡುತ್ತಾರೆ. ತುಂಬ ಸುಂದರವಾಗಿದೆ ಆಶ್ರಮ. ಎಷ್ಟೋ ವರ್ಷಗಳ ನಂತರ ದೊಡ್ಡ ಭಾವಿಯನ್ನು ನೋಡಿ ಸಂತಸಗೊಂಡಿದೆ. ಏನೇ ಮಿಸ್ಸ್ ಮಾಡ್ಕೊಂಡರು ಅಲ್ಲೇ ಮರದಮೇಲೆ ಕೂತು ಬಂದು ಹೋಗುವರನ್ನ ನೋಡ್ತಾ ಬೆಚ್ಚಿಬಿದ್ದು ಬೈಕೊಳ್ಳೊ ನವಿಲುಗಳನ್ನು ಮಿಸ್ಸ್ ಮಾಡ್ಕೋಬೇಡಿ.

ತಿರುವನ್ನಾಮಲೈನಲ್ಲಿ ಇವೆಲ್ಲದರ ಜೊತೆ, ಊರಿನ ಹೆಸರೇ ಸೂಚಿಸುವಂತೆ, ಮುಖ್ಯ ಆಕರ್ಷನೆಯೆಂದರೆ ಅಲ್ಲಿನ ’ಗಿರಿ’. ಈ ಗಿರಿಯನ್ನು ಸುತ್ತಲು ಹುಣ್ಣಿಮೆಯಂದು ನಾನಾ ಕಡೆಯಿಂದ ಜನ ಬರುತ್ತಿರುತ್ತಾರೆ. ಒಳ್ಳೆಯ ರಸ್ತೆ ಹಾಗು ಫ಼ುಟ್‍ಪಾತ್‍ಗಳನ್ನು ನಿರ್ಮಿಸಲಾಗಿದೆ. ಭಕ್ತಾದಿಗಳಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿದ್ದರೆ ಅಲ್ಲಿನ ಮುನಿಸಿಪಾಲಿಟಿಯವರು. ಈ ಗಿರಿದರ್ಶನದ ದಾರಿ ಸುಮಾರು ೧೪ ಕಿ.ಮಿ ಇದ್ದು ಹಲವು ಶಿವನ ದೇವಸ್ಥಾನಗಳನ್ನು ಕಾಣಬಹುದು ಹಾಗು ಇತ್ತೀಚೆಗೆ ನಿತ್ಯಾನಂದ ಪೀಠಾರೋಹಣ ಮಾಡಬೇಕಿದ್ದ ಆಶ್ರಮವು ಸಿಗುತ್ತದೆ . ಹೀಗೆ ಗಿರಿದರ್ಶನ ಮಾಡುವ ದಾರಿಯಲ್ಲೆ ಹಲವು ಹೋಟೆಲ್‍ಗಳಿವೆ. ನಾವು ಅಲ್ಲಿಯೇ ದಾರಿಯಲ್ಲಿದ್ದ ಹೋಟೆಲ್ ರಾಮಕೃಷ್ಣದಲ್ಲಿ ಊಟಮುಗಿಸಿದೆವು. ಜಾಗಾ ಸ್ವಲ್ಪ ಇಕ್ಕಟ್ಟಾಗಿದ್ದರು ಊಟ ಚನ್ನಾಗಿಯೇ ಇತ್ತು. ನಮ್ಮ ಪಯಣ ಮುಂದೊರೆಯಿತು.

ಅಲ್ಲಿಂದ ನಾವು ಮದುರೈಗೆ ತೆರಳಬೇಕಿತ್ತು. ಹೇಗಿದ್ದರು ಟ್ರಿಚಿ (ತಿರುಚಿರಪಲ್ಲಿ ಅಂತಲೂ ಕರೆಯುತ್ತಾರೆ) ಮೇಲೆ ಹೋಗಬೇಕಿದ್ದರಿಂದ ಮಧ್ಯೆ ಶ್ರೀರಂಗಮ್‍ಗೆ ಹೋಗಿ ಶ್ರೀರಂಗನಾಥನ ದರ್ಶನ ಮಾಡೋಣ ಅಂತ ಯೋಚಿಸಿದ್ದೆವು. ತ್ರಿವನ್ನಾಮಲೈನಿಂದ ಟ್ರಿಚಿಗೆ ತಿರುಕೊವಲೂರ್ ಮೇಲೆ ಹೋಗಬೇಕು. ಹಾಗೆ ಮುಂದೊರೆದರೆ ಮದುರೈ-ಚೆನೈ ಹೈವೇ ಸಿಗುತ್ತದೆ. ಹೈವೇನಲ್ಲಿ ಸಾಗುತ್ತ ಟ್ರಿಚಿಗಿಂತ ಮೊದಲೇ ಶ್ರೀರಂಗಮ್‍ಗೆ ದಾರಿ ಸಿಗುತ್ತದೆ.

ಮುಂದಿನ  ಕಥೆ ಮುಂದಿನ ಅಂಕಣದಲ್ಲಿ...........