ನಮ್ಮ ವಿಧ್ಯಾರ್ಥಿಗಳ ಜೀವನವೆಲ್ಲ ಈ ಒಂದು ಕೆಲಸಕ್ಕೆ ಮುಡುಪಿಟ್ಟಿರುತ್ತೇವೆ. ಇಡೀ ವರ್ಷ ಅಂದ್ರೆ ಸುಮಾರು ಹತ್ತು ತಿಂಗಳ ಕಾಲ ಕಲೆತಿದ್ದೆಲ್ಲಾ ಕೇವಲ ಮೂರು ಘಂಟೆಗಳಲ್ಲಿ ಬರೆಯಬೇಕು. ಹೀಗೆ ಬರೆದಿದ್ದಕ್ಕೆ ನಮ್ಮ ಮಾನ್ಯ ಗುರುಗಳು, ಅಧ್ಯಾಪಕರುಗಳೆಲ್ಲರೂ ಪಾಪ ತಲೆ ಹೊಡಕೊಳ್ತಾ ಕರೆಕ್ಷನ್ನು ಮಾಡಿ ಅಂಕಗಳನ್ನ ಕೊಡ್ತಾರೆ. ಅವರಿಗೂ ಕಷ್ಟ ನಮಗೂ ಕಷ್ಟ.ತುಂಬಾನೆ ಕಷ್ಟವಾದ ಕೆಲಸ ಇಬ್ಬರದು.
ನನ್ನ ಅಭಿಪ್ರಾಯದಲ್ಲಿ ಈ ಪರೀಕ್ಷೆಗಳ ಪದ್ದತಿಯನ್ನೇ ತೆಗೆದು ಹಾಕಬೇಕು. ನಮ್ಮ ವಿಧ್ಯಾರ್ಥಿಗಳ ಪಾಂಡಿತ್ಯ ಅಥವಾ ನಾವು ಎಷ್ಟು ಕಲಿತಿದ್ದೇವೆ ಅನ್ನೋದನ್ನ ಅಳಿಯೋದಕ್ಕೆ ಬೇರೆ ರೀತಿಯ ಒಂದು ಮಾಪನವನ್ನು ಕಂಡುಹಿಡಿಯಬೇಕು.
ನಾವು ಕಲಿತಿರುವುದು ಇನ್ನೊಬ್ಬರಿಗೆ ಹೇಳಿಕೊಡೋದ್ರಿಂದ ನಮಗೂ ಉಪಯೋಗ ಹಾಗು ಹೇಳಿಕೊಟ್ಟವರಿಗೆ ಅರ್ಥವಾದರೆ ನಾವು ಆ ವಿಷಯವನ್ನು ತಕ್ಕಮಟ್ಟಿಗೆ ತಿಳಿದಿದ್ದೇವೆ ಅಂತ ಭಾಸವಗುತ್ತೆ. ಹೀಗೇನಾದರೂ ಮಾಡಬೆಕು.
ಈ ಪರೀಕ್ಷೆಯ ಪೆಡಂಭೂತ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಹುಡುಗರು ಸುಮ್ನೆ ಸಮಯ ಕಳೆಯುವುದಕ್ಕೆ ಇದೂ ಒಂದು ದಾರಿಯೆಂದು ಸಲೀಸಾಗಿ ತೆಗೆದುಕೊಳ್ಳುತಿದ್ದಾರೆ.
ನಾನು ಇಸ್ರೋ ರವರು ನಡೆಸಿದ ಒಂದು ಪರೀಕ್ಷೆ ಬರೆದೆ.ಅದು ರಾಷ್ಟೀಯ ಮಟ್ಟದ ಪರೀಕ್ಷೆ ಆಗಿತ್ತು.ನಾನು ಬರೆದದ್ದು ಸುಮ್ನೆಯೇ ನಲ್ಲ ಅವರು ನಡೆಸುವ ಬಿ.ಟೆಕ್ ಮಾಡಿ ಅಲ್ಲೇ ಕೆಲಸ ಮಾಡಬೇಕು ಅನ್ನೋದು ನನ್ನ ಕನಸು ಹಾಗು ಆಶಯವೂ ಹೌದು. ಅಲ್ಲಿ ನಮಗೆ ಹತ್ತರಿಂದ ಹನ್ನೆರಡು ಘಂಟೆಯವರೆಗು ಒಂದು ಪೇಪರ್ರು ಹಾಗು ಮತ್ತೊಂದು ಎರೆಡರಿಂದ ನಾಲ್ಕು ಘಂಟೆಗಳವರೆಗಿತ್ತು.ಆ ಮಧ್ಯೆ ಸಿಕ್ಕಿದ ಒಂದುವರೆ ಘಂಟೆಗಳ ಬಿಡುವಿನಲ್ಲಿ ಅಲ್ಲಿದ್ದ ಕೆಲವರನ್ನು ಮಾತನಾಡಿಸಿ ಸುಮಾರು ಹುಡುಗರು ಮಾತನಾಡೋದನ್ನ ಗಮನಿಸಿದೆ. ಅವರು ಹೇಳುವ ಪ್ರಕಾರ ಅವರು ಭಾರತದಲ್ಲಿ ನಡೆಯುವ ಈ ರೀತಿಯ ಪ್ರವೇಶ ಪರೀಕ್ಷೆಗಳನ್ನೆಲ್ಲ ಬರೆಯುತ್ತಿದ್ದರಂತೆ. ಯಾಕೆ ಹೀಗೆ ಅಂತ ಕೇಳಿದಕ್ಕೆ ಒಬ್ಬರು ಹೇಳಿದ್ದು ಹೀಗೆ "ಏನ್ ಹೀಗೆ ಕೆಳ್ತಿದ್ದಿರ. ಐಐಟಿ ಸಿಕ್ಲಿಲ್ಲ ಅಂದ್ರೆ ಐಐಎಸ್ಟಿ(ಅವತ್ತು ಬರೆದದ್ದು), ಇಲ್ಲ ಅಂದ್ರೆ ಸಿಈಟಿ ಇಂದ ಬಿ.ಈ...." ಹೀಗೆ ಹೇಳ್ಕೊತಾ ಹೋದರು.
ಏನೇ ಹೇಳಿ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಇರಲಿ ಇದ್ದೆಲ್ಲವನ್ನು ನೋಡಿ ಈ ಪರೀಕ್ಷ ಪದ್ಧತಿ ತೆಗೆದು ಹಾಕಬೇಕನಿಸಿ ಬರೆದೆ....ಎಲ್ಲರು ಒಪ್ತಿರಾ ಅಂತ ನಂಬಿದ್ದೇನೆ.
ಶನಿವಾರ, ಏಪ್ರಿಲ್ 17, 2010
ಮಂಗಳವಾರ, ಏಪ್ರಿಲ್ 13, 2010
ಜಾತ್ರೆಯ ದಿವಸ
ಇವತ್ತು ನಮ್ಮ ಕಾಲೇಜಿನಲ್ಲಿ ಕೊನೆಯ semester studentsಗೆ Graduation Day. ಅಂದರೆ studentsಗೆ ತಾವುಗಳೆಲ್ಲರು ಈ ಮೂರು ವರ್ಷ ಕೊಟ್ಟಿದ್ದ ಕಷ್ಟಗಳೆಲ್ಲದಕ್ಕೂ ತೆರೆ ಬಿತ್ತು ಅಂತ ಹೇಳೋದಕ್ಕೆ ಕಾಲೇಜಿನ managementರವರು ಮಾಡುವ ಕಾರ್ಯಕ್ರಮ.
ಅದಕ್ಕೆ ಹುಡುಗರೆಲ್ಲರೂ ಸೂಟು ಬೂಟಿನಲ್ಲೂ ಹಾಗು ಹುಡುಗಿಯರು ಸೀರೆಯಲ್ಲೂ ಬರಬೇಕಾಗಿ ಸವಿನಯ ಪ್ರಾರ್ಥನೆ ಮಾಡಲಾಗಿತ್ತು.
ನಾವು ಮೊದಲನೆಯ ವರ್ಷದವರು ಸುಮ್ಮನೆ ಆ ಕಾರ್ಯಕ್ರಮ ಹೇಗಿರತ್ತೊ ಏನೋ ಎಂದು ತಿಳೆದುಕೊಳ್ಳಲು ಹೋಗಿದ್ದೆವು.
ನಾವು ಕಾಲೇಜು ತಲುಪಿದಾಗ ಸುಮಾರು ಹತ್ತುವರೆ ಘಂಟೆಯಾಗಿತ್ತು. ಫೋಟೋ ತೆಗೆಯುವ/ ತೆಗೆಸಿಕೊಳ್ಳುವ ಕೈಂಕರ್ಯ ನಡೆಯುತಿತ್ತು. ಅಲ್ಲಿದ್ದವರನ್ನ ನೋಡಿ ನನಗೆ ನಮ್ಮ ಊರಿನ ಜಾತ್ರೆ ನೆನಪಾಯಿತು. :)
ಸರಿ ಅಲ್ಲಿ ಹೋಗಿ ಮಾಡಿದ್ದೇನಪ್ಪಾ ಅಂದರೆ ಕಣ್ಣು ತಂಪು ಮಾಡಿಕೊಂಡಿದಷ್ಟೆ. ಏಕೆಂದರೆ ನಮಗಲ್ಲಿ ಬೇರೆ ಏನು ಕೆಲಸವಿರಲಿಲ್ಲ. ನಮ್ಮನ್ನ ಯಾವುದೆ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಲಿ ಅಥವಾ ಬೇರೆ ಕೆಲಸಗಳಿಗಾಗಲೀ ನಿಯೋಜಿಸಿರಲಿಲ್ಲ
ಬಡಪಾಯಿಗಳು ನಾವು ಇನ್ನೇನು ಮಾಡೇವು ?!
ಈ ಕಣ್ಣು ತಂಪು ಮಾಡಿಕೊಳ್ಳುವಿಕೆಯ ಮಧ್ಯದಲ್ಲಿ ಆವಾಗಾವಗ ಸ್ಟೇಜಿನ ಮೆಲೆ ನಡೆಯುತ್ತಿದ್ದ ಕಾರ್ಯಕ್ರಮ ನೋಡುತ್ತಾ ಶಿಳ್ಳೆ ಹೊಡಿತಾಯಿದ್ದೆ...
ಇದೆಲ್ಲ ಮುಗಿಸಿ ಸುಮಾರು ಒಂದುವರೆ ಹೊತ್ತಿಗೆ ಹೊರೆಟು ಮನೆಗೆ ಬಂದೆ. ಬರೋ ಹೊತ್ತಿಗೆ ಸ್ವಲ್ಪ ಜ್ವರ ಬಂದಂಗಿತ್ತು. ಹಾಗಾಗಿ ಒಂದೇ ಒಂದು ರೊಟ್ಟಿ ತಿಂದು ಮಾತ್ರೆ ನುಂಗಿ ಮಲಗಿದೆ. ನಂತರ ಎದ್ದು ಮೈಲ್ಸ್ ನೋಡೋಣಾ ಅಂತ ಕಂಪ್ಯೂಟರ್ ಮುಂದೆ ಕೂತೆ, ಸುಮ್ನೆ ಇರ್ಲಿ ದಾಖಲೆ ಗೆ ಅಂತ ಇದನ್ನು ಬರೆದೆ.

ಶನಿವಾರ, ಏಪ್ರಿಲ್ 10, 2010
ಚಿತ್ರ ವಿಚಿತ್ರ ದಿನ
ಈ ದಿನ ಸೂರ್ಯಹುಟ್ಟಿದ ಕ್ಷಣದಿಂದಲೇ ವಿಚಿತ್ರಗಳ ಸರಮಾಲೆ ಶುರುವಾಯಿತು. ಎಲ್ಲವನ್ನು ಹೇಳೋದಿಲ್ಲ, ತುಂಬ ಕೊರಿತಾನೆ ಅನ್ನಿಸಬಹುದು..
ಮೊದಲನೇ ವಿಚಿತ್ರವೆಂದರೆ, ಯಾವತ್ತು ಮೆಸೇಜೇ ಮಾಡದ ನನ್ನೆ ಶಾಲೆಯ ಸ್ನೇಹಿತೆ ಶುಭೋದಯದ ಮೆಸೇಜನ್ನ ಕಳಿಸಿದ್ದಳು.
ಇವತ್ತು physics practical mock test ಬೇರೆ ಇತ್ತು. ಅದಕ್ಕೆ ಒಂದು ಬಾರಿ revise ಮಾಡೋಣ ಅಂದುಕೊಂಡ ಕ್ಷಣವೇ ನನ್ನ ಮೃದಂಗದ ಗುರುಗಳು ಫೋನ್ ಮಾಡಿ ಪಾಠಕ್ಕೆ ಬಾಯೆಂದರು. ಅಲ್ಲಿ ಯಾವತ್ತು ಸಿಗದ ನನ್ನ ಮಾವ ಹಾಗು ನನ್ನ ತಮ್ಮ ಸಿಕ್ಕಿದರು.
ಮನೆಗೆ ಮರಳಿ ಬರುವ ಹೊತ್ತಿಗೆ ಲೇಟಾಗಿತ್ತು .ಹಾಗಾಗಿ ತಿಂಡಿ ತಿಂದು ಕಾಲೇಜಿಗೆ ಹೊರಟೆ. ದಾರಿಯಲ್ಲಿ ಅಕ್ಷಯ ಸಿಕ್ಕಿ ಇಬ್ಬರು ಒಟ್ಟಿಗೆ ಪರೀಕ್ಷೆಯ ಬಗ್ಗೆ ಮಾತನಾಡಿಕೊಂಡು ಅಂತು ಇಂತು ಕಾಲೇಜಿಗೆ ಬಂದ್ವಿ.
physics lab ನಲ್ಲಿ ಪರೀಕ್ಷೆ ಶುರುವಾಯಿತು ನಮ್ಮೆಲ್ಲರ "ನೆಚ್ಚಿನ" ಗುರುಗಳ ನೇತೃತ್ವದಲ್ಲಿ. ಎಲ್ಲ ಮುಗಿದ ಮೆಲೆ ನಮ್ಮ ಗುರುಗಳು ಯಾವುದೇ ಕಾರಣವಿಲ್ಲದೆ ಒಂದಿಷ್ಟು ಅಂಕಗಳನ್ನ ಕಳೆದು ನಿನಗೆ ಇಷ್ಟು ಸಾಕು ಹೋಗಿ ಬಾಪ್ಪ ಅಂತ ಕಳಿಸಿಬಿಟ್ಟರು.
ಸರಿ ಅದಾಯ್ತು ಅಂದುಕೊಂಡು ಕೆಮಿಸ್ಟ್ರಿ ಕ್ಲಾಸಿಗೆ ಹೋಗೋಣ ಅಂದುಕೊಂಡರೆ, ನಮ್ಮ ಗುರುಗಳು ಕರೆದು ಇದ್ದವರಿಗೆಲ್ಲ atttendance ಕೊಟ್ಟು ಮನೆಗೆ ಹೋಗಿಯೆಂದರು.
ಊಟ ಮುಗಿಸಿ ಮನೆಗೆ ನಾನು, ಅಕ್ಷಯ, ಪ್ರಿಯಾಂಕ, ಕೈ ಮುರೆದುಕೊಂಡಿರುವ ವಿರಜ ಮತ್ತು ಇನ್ನೊಬ್ಬರು ಹೊರೆಟವು. ಈ ಕೆಲವು ದಿನಗಳಿಂದ ಮಾತನಾಡಿಸದ ವಿಶೇಷ ವ್ಯಕ್ತಿ ನಮ್ಮೆಲ್ಲರೊಂದಿಗೆ ಮಾತಾಡಿದ್ದಲ್ಲದೆ ನಮ್ಮೆಲರಿಗೂ ಕಡಲೆಕಾಯಿ ಕೊಡಿಸಿದರು ಹಾgU ಎ.ಸಿ. ಬಸ್ಸಿನಲ್ಲಿ ನಮ್ಮೆಲ್ಲರಿಗೂ ಟಿಕೆಟ್ಟುಕೊಂಡರು.
ಇದೆಲ್ಲ ಆದ ಮೇಲೆ ನಾನು ಈ ಬ್ಲಾಗನ್ನು ಬರೆದಿದ್ದೀನಿ..

ಬ್ಲಾಗಿನ ಚರಿತ್ರೆ
ನಾನು ನನ್ನ ಜೀವನದಲ್ಲಿ ಎಷ್ಟೋ ವಿಷಯಗಳಿಗೆ ಆಶ್ಚರ್ಯ ಪಟ್ಟಿದ್ದೇನೆ. ಆ ಎಲ್ಲ ಅನುಭವಗಳನ್ನ ಈ ಬ್ಲಾಗಿನಲ್ಲಿ ಹಾಕಂತ ನನ್ನ ಸ್ನೇಹಿತರು ಹಾಗೂ ನನ್ನ ಗುರುಗಳು ತುಂಬಾ ಸಲಹೆಗಳನ್ನು ಕೊಟ್ಟಿದ್ದಾರೆ.
ಇವರೆಲ್ಲರ ಸಲಹೆಗಳಿಂದಲೂ ಹಾಗೂ ನನ್ನ ಕ್ರಿಯಾಶೀಲತೆಯಿಂದಲೂ ನನ್ನ ದಿನದ ಕಾಂಡವನ್ನು, ಕರ್ಮಕಾಂಡವನ್ನು ಇಲ್ಲಿ ಪೋಸ್ಟ್ ಮಾಡ್ತೀನಿ.
ತಪ್ಪುಗಳಿದ್ದರೆ ಕ್ಷಮಿಸಿ ಸರಿತಿದ್ದಿ....

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)