ನಮ್ಮ ವಿಧ್ಯಾರ್ಥಿಗಳ ಜೀವನವೆಲ್ಲ ಈ ಒಂದು ಕೆಲಸಕ್ಕೆ ಮುಡುಪಿಟ್ಟಿರುತ್ತೇವೆ. ಇಡೀ ವರ್ಷ ಅಂದ್ರೆ ಸುಮಾರು ಹತ್ತು ತಿಂಗಳ ಕಾಲ ಕಲೆತಿದ್ದೆಲ್ಲಾ ಕೇವಲ ಮೂರು ಘಂಟೆಗಳಲ್ಲಿ ಬರೆಯಬೇಕು. ಹೀಗೆ ಬರೆದಿದ್ದಕ್ಕೆ ನಮ್ಮ ಮಾನ್ಯ ಗುರುಗಳು, ಅಧ್ಯಾಪಕರುಗಳೆಲ್ಲರೂ ಪಾಪ ತಲೆ ಹೊಡಕೊಳ್ತಾ ಕರೆಕ್ಷನ್ನು ಮಾಡಿ ಅಂಕಗಳನ್ನ ಕೊಡ್ತಾರೆ. ಅವರಿಗೂ ಕಷ್ಟ ನಮಗೂ ಕಷ್ಟ.ತುಂಬಾನೆ ಕಷ್ಟವಾದ ಕೆಲಸ ಇಬ್ಬರದು.
ನನ್ನ ಅಭಿಪ್ರಾಯದಲ್ಲಿ ಈ ಪರೀಕ್ಷೆಗಳ ಪದ್ದತಿಯನ್ನೇ ತೆಗೆದು ಹಾಕಬೇಕು. ನಮ್ಮ ವಿಧ್ಯಾರ್ಥಿಗಳ ಪಾಂಡಿತ್ಯ ಅಥವಾ ನಾವು ಎಷ್ಟು ಕಲಿತಿದ್ದೇವೆ ಅನ್ನೋದನ್ನ ಅಳಿಯೋದಕ್ಕೆ ಬೇರೆ ರೀತಿಯ ಒಂದು ಮಾಪನವನ್ನು ಕಂಡುಹಿಡಿಯಬೇಕು.
ನಾವು ಕಲಿತಿರುವುದು ಇನ್ನೊಬ್ಬರಿಗೆ ಹೇಳಿಕೊಡೋದ್ರಿಂದ ನಮಗೂ ಉಪಯೋಗ ಹಾಗು ಹೇಳಿಕೊಟ್ಟವರಿಗೆ ಅರ್ಥವಾದರೆ ನಾವು ಆ ವಿಷಯವನ್ನು ತಕ್ಕಮಟ್ಟಿಗೆ ತಿಳಿದಿದ್ದೇವೆ ಅಂತ ಭಾಸವಗುತ್ತೆ. ಹೀಗೇನಾದರೂ ಮಾಡಬೆಕು.
ಈ ಪರೀಕ್ಷೆಯ ಪೆಡಂಭೂತ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ ಹುಡುಗರು ಸುಮ್ನೆ ಸಮಯ ಕಳೆಯುವುದಕ್ಕೆ ಇದೂ ಒಂದು ದಾರಿಯೆಂದು ಸಲೀಸಾಗಿ ತೆಗೆದುಕೊಳ್ಳುತಿದ್ದಾರೆ.
ನಾನು ಇಸ್ರೋ ರವರು ನಡೆಸಿದ ಒಂದು ಪರೀಕ್ಷೆ ಬರೆದೆ.ಅದು ರಾಷ್ಟೀಯ ಮಟ್ಟದ ಪರೀಕ್ಷೆ ಆಗಿತ್ತು.ನಾನು ಬರೆದದ್ದು ಸುಮ್ನೆಯೇ ನಲ್ಲ ಅವರು ನಡೆಸುವ ಬಿ.ಟೆಕ್ ಮಾಡಿ ಅಲ್ಲೇ ಕೆಲಸ ಮಾಡಬೇಕು ಅನ್ನೋದು ನನ್ನ ಕನಸು ಹಾಗು ಆಶಯವೂ ಹೌದು. ಅಲ್ಲಿ ನಮಗೆ ಹತ್ತರಿಂದ ಹನ್ನೆರಡು ಘಂಟೆಯವರೆಗು ಒಂದು ಪೇಪರ್ರು ಹಾಗು ಮತ್ತೊಂದು ಎರೆಡರಿಂದ ನಾಲ್ಕು ಘಂಟೆಗಳವರೆಗಿತ್ತು.ಆ ಮಧ್ಯೆ ಸಿಕ್ಕಿದ ಒಂದುವರೆ ಘಂಟೆಗಳ ಬಿಡುವಿನಲ್ಲಿ ಅಲ್ಲಿದ್ದ ಕೆಲವರನ್ನು ಮಾತನಾಡಿಸಿ ಸುಮಾರು ಹುಡುಗರು ಮಾತನಾಡೋದನ್ನ ಗಮನಿಸಿದೆ. ಅವರು ಹೇಳುವ ಪ್ರಕಾರ ಅವರು ಭಾರತದಲ್ಲಿ ನಡೆಯುವ ಈ ರೀತಿಯ ಪ್ರವೇಶ ಪರೀಕ್ಷೆಗಳನ್ನೆಲ್ಲ ಬರೆಯುತ್ತಿದ್ದರಂತೆ. ಯಾಕೆ ಹೀಗೆ ಅಂತ ಕೇಳಿದಕ್ಕೆ ಒಬ್ಬರು ಹೇಳಿದ್ದು ಹೀಗೆ "ಏನ್ ಹೀಗೆ ಕೆಳ್ತಿದ್ದಿರ. ಐಐಟಿ ಸಿಕ್ಲಿಲ್ಲ ಅಂದ್ರೆ ಐಐಎಸ್ಟಿ(ಅವತ್ತು ಬರೆದದ್ದು), ಇಲ್ಲ ಅಂದ್ರೆ ಸಿಈಟಿ ಇಂದ ಬಿ.ಈ...." ಹೀಗೆ ಹೇಳ್ಕೊತಾ ಹೋದರು.
ಏನೇ ಹೇಳಿ ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಇರಲಿ ಇದ್ದೆಲ್ಲವನ್ನು ನೋಡಿ ಈ ಪರೀಕ್ಷ ಪದ್ಧತಿ ತೆಗೆದು ಹಾಕಬೇಕನಿಸಿ ಬರೆದೆ....ಎಲ್ಲರು ಒಪ್ತಿರಾ ಅಂತ ನಂಬಿದ್ದೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ