ಎಲ್ಲರು ದೀಪಾವಳಿಯ ಹಬ್ಬವನ್ನು ಸಂಭ್ರಮ-ಸಡಗರದಿಂದ ಹಾಗು ಎಚ್ಚರಿಕೆಯಿಂದ ಆಚರಿಸಿದ್ದಿರಿ ಅಂಥ ಭಾವಿಸುತಿದ್ದಿನಿ. ನನಿಗೆ ದೀಪಾವಳಿ ಹಬ್ಬದ ನಂತರವೆ ನನ್ನ ಪರೀಕ್ಷೆ ಆರಂಭವಾಯಿತು.
ಪರೀಕ್ಷೆ ನನ್ನ ದೀಪಾವಳಿಯ ಸಂಭ್ರಮಕ್ಕೆ ಅಡ್ಡಿ ಬರಲಿಲ್ಲ ಹಾಗಂತ ಡಬ್ಬ-ಡಬ್ಬ ಪಟಾಕಿಗಳನ್ನೇನು ಹೊಡಿಲಿಲ್ಲ ಆದರೆ ನನ್ನ ಮಾವನ ಮನೆಗೆ ಹೋಗಿ ಅಲ್ಲಿ ನನ್ನ ತಮ್ಮಂದಿರ ಜೊತೆ ಸಮಯ ಕಳೆದೆ.
ಪರೀಕ್ಷೆ ನಂತರ ಸುಮಾರು ಮೂರು ವಾರಗಳ ಕಾಲ ರಜೆ ಇತ್ತು. ಇನ್ನು ರಜೆ ಮುಗಿದಿಲ್ಲ. ಈ ರಜಾದಿವಸಗಳನ್ನ ಕಳೆಯುವುದು ಬಹಳ ಕಷ್ಟಕರ. ಆದರೆ ಈ ಸರ್ತಿ ಕಷ್ಟವಾಗಲಿಲ್ಲ.
ಬೆಂಗಳುರಿನಲ್ಲಿ ಪ್ರಪ್ರಥಮ ಭಾರಿಗೆ ಖಗೋಳವಿಜ್ಞನದ ಒಂದು ಯಾತ್ರೆ ನಡೆಯಿತು. ಇದು ಬೆಂಗಳುರಿನಲ್ಲಿರುವ ಹಲವಾರು ಸಂಶೋಧನಾ ಸಂಸ್ಥೆಗಳು ಆಯೋಜಿಸಿದ್ದವು. ಇದಕ್ಕೆ ’ಕಲ್ಪನೆಯ ಯಾತ್ರೆ’ಯೆಂದು ನಾಮಕರಣವನ್ನು ಮಾಡಿ ಸುಮಾರು ಹತ್ತು ದಿವಸಗಳಕಾಲ ನೆಹರು ತಾರಾಲಯದ ಆವರಣದಲ್ಲಿ ನಡೆಸಲಾಯ್ತು.
ನನಗೆ ಈ ’ಹಬ್ಬ’ದಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುವ ಅವಕಾಶ ವದಗಿ ಬಂದಿತ್ತು. ನಾನು ಅಲ್ಲಿ ಬೆಂಗಳುರು ಆಸ್ಟ್ರೊನೋಮಿಕಲ್ ಸೊಸೈಟಿಯ ಪರವಾಗಿ ಭಾಗವಹಿಸಿದ್ದೆ. ದಿನವಿಡಿ ಅಲ್ಲಿಗೆ ಬಂದ ಶಾಲ ಮಕ್ಕಳಿಗೆ ಹಾಗು ಜನ ಸಾಮಾನ್ಯರಿಗೆ ಖಗೋಳವಿಜ್ಞನದ ಬಗ್ಗೆ ಮಾಹಿತಯನ್ನ ಕೊಡೋದು ಹಾಗು ಅಲ್ಲಿ ಇದ್ದಂತ ಪೋಸ್ಟರ್ಗಳನ್ನು ವಿವರಿಸೋದು ನನ್ನ ಕರ್ತವ್ಯವಾಗಿತ್ತು.
ಈ ರೀತಿ ಹತ್ತು ದಿನಗಳು ಮಕ್ಕಳಿಗೆ ಹೇಳಿಕೊಡುವ ಪ್ರಯತ್ನದಲ್ಲಿ ನಾನು ಎಷ್ಟೋ ವಿಷಯಗಳನ್ನು ತಿಳಿಯಲು ಹಾಗು ಕಲಿಯಲು ಸಾಧ್ಯವಾಯ್ತು.
ಆದರೆ ಕಷ್ಟ ಪ್ರಾರಂಭವಾಗಿರೋದು ಈಗ. ಇನ್ನು ಒಂದು ವಾರ ರಜೆ ಹೇಗೆ ಕಳೆಯೋದು ಅಂಥ ಅರ್ಥವಾಗ್ತಿಲ್ಲ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ