ಹಿಂದೇ ದಕ್ಷಿಣ ಭಾರತ ಪ್ರವಾಸದ ಬಗ್ಗೆ ಬರೆದಿದ್ದೇ. ಅದನ್ನೇ ಮುಂದುವರಿಸೋಣಾ ಅಂತ ಅಂದುಕೊಂಡೆ ಆದರೆ ಆ ಪ್ರವಾಸದ ವಿವರಗಳನ್ನು ಬರೆದಿದ್ದ ಪುಸ್ತಕ ಸಿಗಲಿಲ್ಲಾ. ಆ ಕಥನವನ್ನ ಮುಂದಿನ ಬಾರಿ ಬರೆಯುತ್ತೇನೆ, ಸಧ್ಯಕ್ಕೆ ನನ್ನ ಜಮ್ಮು ಪ್ರವಾಸದ ಕಥನವನ್ನು ಹಂಚಿಕೊಳ್ಳುತ್ತೇನೆ.
ನಮ್ಮ ದೇಶದಲ್ಲಿ ನಡೆಯುವ ಹಲವು ಮುಖ್ಯ ವೈಜ್ಞಾನಿಕ ಸಮ್ಮೇಳನಗಳಲ್ಲಿ ಪ್ರಮುಖವದದ್ದು ಇಂಡಿಯನ್ ಸೈನ್ಸ್ ಕಾಂಗ್ರೇಸ್. ಇದು ಪ್ರತೀ ವರ್ಷ ನಡೆಯುತ್ತದೆ, ಪ್ರತೀ ಬಾರಿ ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತದೆ. ಸುಮಾರು ೧೦೦ ಆವೃತ್ತಿಯನ್ನು ಹೊಂದಿರುವ ಪ್ರತಿಷ್ಠಿತ ಕಾರ್ಯಕ್ರಮ ಇದು. ೧೦೧ ನೇ ಸೈನ್ಸ್ ಕಾಂಗ್ರೇಸ್ಸನ್ನು ಜಮ್ಮುನಲ್ಲಿನ ಜಮ್ಮು ವಿಶ್ವವಿದ್ಯಾಲದವರು ಆಯೋಜಿಸಿದ್ದರು. ದೇಶದ ಮೂಲೆ ಮೂಲೆಗಳಿಂದ, ಸಂಶೋಧನಾ ಕೇಂದ್ರಗಳಿಂದ ಪ್ರಮುಖ ಸಂಸ್ಥೆಗಳಿಂದ, ವಿಶ್ವವಿದ್ಯಾಲಯಗಳಿಂದ ವಿಜ್ಙಾನಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಶೋಧನಾಕಾರರು, ಆಗಮಿಸಿ ತಮ್ಮ ತಮ್ಮ ಕೆಲಸಗಳನ್ನು, ಸಂಶೋಧನೆಗಳನ್ನು ವಿವರಿಸಿ, ಚರ್ಚಿಸಿ, ಅಭಿಪ್ರಾಯಗಳನ್ನು ಹಂಚಿಕೋಳ್ಳುತ್ತಾರೆ. ಇಂತಹ ಒಂದು ಸಮ್ಮೇಳನಕ್ಕೆ ಹೋಗಿ ಅಲ್ಲಿ ಎಲ್ಲರ ಮುಂದೆ ಒಂದು ಸಂಶೋಧನಾ ಲೇಖನವನ್ನು ಪ್ರಸ್ತುತ ಪಡಿಸಬೇಕು ಅಂತ ನನ್ನ ಒಬ್ಬ ಪ್ರಾಧ್ಯಾಪಕರು ಪ್ರೇರೇಪಿಸಿದರು. ಅಂತು ಇಂತು ಲೇಖನವನ್ನು ಬರೆದು, ಅದನ್ನು ಕಳಿಸಿ, ಅಲ್ಲಿಂದ ಅದನ್ನು ಪ್ರಸ್ತುತಿಸಲು ಒಪ್ಪಿಗೆ ಪಡೆದು ಪ್ರಯಾಣಕ್ಕೆ ಎಲ್ಲ ಸಿದ್ಧತೆಗಳು ನಡೆದವು!!! ಎಲ್ಲವು ಅಂದುಕೊಂಡಂತ್ತೆ ನಡೆದರೆ ಚೆನ್ನಾಗಿರತ್ತೆ, ಆದರೆ ಹಾಗೆ ಆಗುವುದು ಬಹಳ ಅಪರೂಪ.
ಟ್ರೈನಿನಲ್ಲಿ ಜಮ್ಮುಗೆ ತಲುಪ ಬೇಕಾದ್ರೆ ನಾಲ್ಕು ದಿವಸ ಬೇಕೇ ಬೇಕು. ಇಲ್ಲಿಂದ ದೆಹಲಿಗೆ ಹೋಗಿ ಅಲ್ಲಿಂದ ಮತ್ತೊಂದು ಬಂಡಿಯಲ್ಲಿ ಜಮ್ಮು ತಲುಪಬೇಕು. ನನಗೆ ಒಂದು ಸ್ಪರ್ಧಾತ್ಮಕ ಪರೀಕ್ಷೆ ಇದ್ದ ಕಾರಣ ಟ್ರೈನಿನಲ್ಲಿ ಹೋಗಲಾಗಲಿಲ್ಲ. ವಿಮಾನ ಪ್ರಯಾಣಕ್ಕೆ ಟಿಕೆಟ್ಟು ಬುಕ್ಕ್ ಮಾಡಿಕೊಂಡೆ. ಪರೀಕ್ಷೆ ಮುಗಿಸಿ ಮರು ದಿನ ಬೆಳ್ಳಂಬೆಳಗೆ ವಿಮಾನಯಾನಕ್ಕೆ ಹೋಗಿ ದೆಹಲಿಗೆ ಹೊರಟೆ. ವಿಮಾನದಲ್ಲಿಯೂ ಸಹ ದೆಹಲಿಗೆ ಹೋಗಿ ಅಲ್ಲಿಂದ ಜಮ್ಮು ಮತ್ತೋಂದು ವಿಮಾನ ಹತ್ತಬೇಕು. ಬೆಂಗಳೂರಿನಿಂದ ಪ್ರತ್ಯೇಕ ವಿಮಾನವಿಲ್ಲ. ಒಂದೇ ವಿಮಾನಸಂಸ್ಥೆಯ ವಿಮಾನಗಳೇ ಆದರು ಎರಡು ವಿಮಾನಗಳ ನಡುವೆ ಸುಮಾರು ಎರಡುವರೆ ಘಂಟೆ ಸಮಯವಿತ್ತು. ಒಂದೇ ವಿಮಾನಸಂಸ್ಥೆಯದಾದ್ದರಿಂದ ಲಗ್ಗೇಜಿನ ಜಂಜಾಟ ಇರಲಿಲ್ಲ ಹಾಗು ಬೋರ್ಡಿಂಗ್ ಪಾಸ್ನ ತಲೆ ಬಿಸಿ ಇರಲಿಲ್ಲ. ಇಲ್ಲಿ ಬೆಂಗಳೂರಿನಲ್ಲಿ ಚೆಕ್ ಮಾಡಿಸಿ ಲಗ್ಗೇಜ್ ಹಾಕಿದ್ರೆ ಸಾಕು, ಜಮ್ಮುನಲ್ಲಿ ತೆಗೆದುಕೊಳ್ಳಬಹುದಾಗಿತ್ತು. ಹಾಗಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಏನು ಕೆಲಸವಿರಲಿಲ್ಲ. ಹಾಗು ಹೀಗು ೨ ಘಂಟೆ ಕಾಲ ಕಳೆದು ಚೆಕ್-ಇನ್ ಆಗಿ ವಿಮಾನದತ್ತಾ ತೆರಳಿದೆ. ಆಲ್ಲಿ ನನಗೆ ಮೊದಲನೇ ರೋಮಾಂಚಕಾರಿ ವಿಷಯ ತಗುಲಿತು. ನಮ್ಮ ಅವತ್ತಿನ್ನ ಪ್ರಯಾಣವನ್ನು ನಿರ್ವಹಿಸುತ್ತಿದ್ದದ್ದು ಹಾಗು ವಿಮಾನವನ್ನು ನಡೆಸುತ್ತಿದ್ದದ್ದು ಒಬ್ಬ ಮಹಿಳೆ. ನನ್ನ ಮೊದಲನೇಯ ವಿಮಾನಯಾಣವನ್ನು ಎಂದಿಗು ಮರೆಯದ ಹಾಗೆ ಮಾಡಿದಳು ಆಕೆ. ವಿಮಾನವನ್ನು ನಾಜೂಕಾಕಿ ಸಮಯಕಿಂತ ಮುಂಚಿತವಾಗಿ ಜಮ್ಮು ತಲುಪಿಸದ ಆ ಪೈಲಟ್ಗೆ ನನ್ನ ನಮನಗಳು. ಖುಷಿಯಾಗಿ ವಿಮಾನ ಹತ್ತಿದೆ. ಮತ್ತೊಂದು ಅನಿರೀಕ್ಷಿತ ಸಂಗತಿ ನನ್ನನ್ನು ರೋಮಾಂಚಗೊಳಿಸಿತು. ಅಲ್ಲಿ ಮೊದಲನೇಯ ಸೀಟಿನಲ್ಲಿ (ಅದು ವಿ.ವಿ.ಐ.ಪಿ ಸೀಟು. ಸಾಮಾನ್ಯವಾಗಿ ಮಂತ್ರಿಗಳಿಗೆ, ಗಣ್ಯವ್ಯಕ್ತಿಗಳಿಗೆ ಸೀಮಿತ) ಸಾಮಾನ್ಯನಾಗಿ ಕುಳಿತಿದ್ದ ಒಂದು ಮಹಾನ್ಚೇತನ ನನ್ನ ಗಮನ ಸೆಳೆದರು. ಅಲ್ಲಿ ಕುಳಿತಿದ್ದಿದ್ದು ಮತ್ಯಾರು ಅಲ್ಲ ಡಾ. ಅಬ್ದುಲ್ ಕಾಲಾಮ್ ಅವರು. ನನ್ನ ಸೀಟಿಗೆ ಚಕ್ಕನೆ ಹೋಗಿ ನನ್ನ ಬ್ಯಾಗನ್ನ ಕ್ಯಾಬಿನ್ಗೆ ಹಾಕಿ ಅವರ ಹತ್ತಿರ ಹೋದೆ. ಸರ್ ನಿಮ್ಮ ಆಟೋಗ್ರಾಫ್ ಬೇಕು ಅಂತ ಪೇಪರ್ರು ಕೊಟ್ಟೆ. ’ ನಿನ್ನ ಹೆಸರೇನು, ಏನು ಮಾಡ್ತಿದ್ದೀಯ’, ಅಂತ ಕೇಳಿದ್ರು ಮೇಷ್ಟ್ರು. ನಾನು ನನ್ನ ವಿವರಗಳನ ಹೇಳಿ, ಜಮ್ಮು ಸೈನ್ಸ್ ಕಾಂಗ್ರೇಸ್ನಲ್ಲಿ ಭಾಗವಹಿಸುತ್ತಿದ್ದೀನಿ. ಅಲ್ಲಿ ಪೋಸ್ಟರ್ ಕೂಡ ಪ್ರೆಸೆಂಟ್ ಮಾಡ್ತಿದ್ದೀನಿ ಅಂದೆ. ’ ತುಂಬಾ ಸಂತೋಷ. ಯಾವ ವಿಷಯದಮೇಲೆ ಕೆಲಸ ಮಾಡಿದ್ದೀಯ ಆ ಪೇಪರ್ನಲ್ಲಿ?’ ಅಂತ ತಕ್ಷಣ ವಿಚಾರಿಸಿದರು. ನಾನು ನನ್ನ ಕೆಲಸದ ಬಗ್ಗೆ ವಿವರಿಸಿದೆ. ’ವಿಷಯ ಚನ್ನಾಗಿದೆ ಹೀಗೆ ಮುಂದೊರಿಸು. ಆಲ್ ದ್ ಬೆಸ್ಟ್’ ಅಂತ ಹಾರೈಸಿದರು. ನಂತರ ಒಂದು ಫೋಟೋಗೂ ಪೋಸ್ ಕೊಟ್ಟರು. ಈ ಎಲ್ಲ ತತಂಗಗಳು ಮುಗಿಯುವ ಹೊತ್ತಿಗೆ ವಿಮಾನ ಹೊರಡಲು ತಯಾರಾಗಿತ್ತು. ನಾನು ನನ್ನ ಸೀಟಿಗೆ ಹೋಗಿ ’ಜೀವನ ಪಾವನವಯ್ತು’ ಅಂತ ಸಂತೋಷದಿಂದ ಕಣ್ಣು ಮುಚ್ಚಿ ಜಮ್ಮುವರೆಗು ಮಲಗಿಬಿಟ್ಟೆ.
ನಾನು ನನ್ನ ಗುರುಗಳು ಹಾಗು ಮಿತ್ರರು ಸೈನ್ಸ್ ಕಾಂಗ್ರೇಸ್ಗೆ ಹೋಗಿ ಅಲ್ಲಿ ಹಲವಾರು ಉಪನ್ಯಾಸಗಳನ್ನು ಕೇಳಿದವು. ಡಿ.ಆರ್.ಡಿ.ಓ ದ ಹಲವು ಉಪನ್ಯಾಸಗಳು ನಮ್ಮ ಭಾರತದ ರಕ್ಷಣಾ ಪಡೆಗಳಿಗಾಗಿ ವಿನ್ಯಾಸಗೋಳಿಸಿದ ಹಲವು ಕಾರ್ಯಕ್ರಮಗಳ ಬಗ್ಗೆ, ಅಗ್ನಿ ಅಂತಹ ಕ್ಷಿಪಣಿಗಳ ಬಗ್ಗೆ ಬೆಳಕು ಚಲ್ಲಿದವು. ’ ಭಾರತದ ಕ್ಷಿಪಣಿಗಳ ಮಹಿಳೆ’ ಎಂದೇ ಪ್ರಸಿದ್ಧಿ ಹೊಂದಿರುವ ಡಾ. ಟೆಸ್ಸಿ ಥಾಮಸ್ ರವರನ್ನು ಭೇಟಿ ಮಾಡಿ ತುಂಬ ಖುಷಿಯಾಯಿತು. ಸಮ್ಮೇಳನದಲ್ಲಿ ಕಲಿಯಲು ಬಹಳಷ್ಟು ದೊರಕಿತು.
ಜಮ್ಮುಯಿಂದ ಕಾಶ್ಮೀರಕ್ಕೆ ಹೋಗೋಣ ಅಂತ ಅಂದುಕೊಂಡೆವು ಆದರೆ ಹಿಮ ಹಿಚ್ಚಾಗಿದೆ ಹೋಗುವುದು ಅಷ್ಟು ಸೂಕ್ತವಲ್ಲವೆಂದು ಬೇಸರಗೋಡಿದ್ದವು. ನಮ್ಮ ಹೋಟೆಲ್ನ ಮಾಲಿಕ, ಕಾಶ್ಮೀರ ಬೇಡ ಅದೇ ದಾರಿಯಲ್ಲಿ ’ ಪಟ್ನಿ ಟಾಪ್’ ಅಂತ ಒಂದು ಪಾರ್ಕಿದೆ. ಅಲ್ಲಿಂದ ಹಿಮಪ್ರದೇಶ ಆರಂಭವಾಗುತ್ತದೆ. ಮತ್ತಿನ್ಯಾವಾಗಲೋ ನೀವು ಜಮ್ಮುವಿಗೆ ಬರೊದು ಜಮ್ಮುವಿಗೆ ಬಂದು ಹಿಮ ನೋಡಲಿಲ್ಲ ಅಂದ್ರೆ ನಿಮ್ಮ ಪ್ರವಾಸ ಪೂರ್ಣವಾಗುವುದಿಲ್ಲ, ಹೋಗಿ ಬನ್ನಿ ಎಂದು ಪ್ರೇರೇಪಿಸಿ ಗಾಡಿಯ ವ್ಯವಸ್ಥೆಯೂ ಮಾಡಿಕೋಟ್ಟರು. ಪಟ್ನಿ ಟಾಪ್ನಿಂದ ಹಿಮಾಲಯ ಶ್ರೇಣಿಯು ಪ್ರಾರಂಭವಾಗುತ್ತದೆ. ಕಾಶ್ಮೀರಕ್ಕೆ ಹೋಗಲಾಗದಿದ್ದರೆ ಹಾಗೂ ಜಮ್ಮುವಿನಲ್ಲಿದ್ದರೆ ಈ ಸ್ಥಳಕ್ಕೆ ಹೋಗಲೇ ಬೇಕು. ಜಮ್ಮು ಕೂಡ ಸುಂದರ ನಗರ. ಅಲ್ಲಿಂದ ವೈಶ್ಣೋದೇವಿ ಬೆಟ್ಟ ದೂರವಿಲ್ಲ. ಜಮ್ಮುನಿಂದ ಕಟ್ರಾಗೆ ಸಾಕಷ್ಟು ಬಸ್ಸುಗಳಿವೆ. ಕಟ್ರಾ ಬೆಟ್ಟದ ಬುಡದಲ್ಲಿದೆ. ಅಲ್ಲಿಂದ ನಡಿಗೆಯಲ್ಲಿ, ಕುದುರೆಯಮೇಲೆ ಅಥವ ಡೋಲಿಗಳಲ್ಲಿ ದೆವಸ್ಥಾನವನ್ನು ತಲುಪಬಹುದು. ನಮಗೆ ಸಮಯದ ಆಭಾವ ಇದ್ದರಿಂದ ಹೋಗಲಾಗಲಿಲ್ಲ.
ಮತ್ತೆ ನಾವು ಜಮ್ಮುಯಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದೆವು. ದಾರಿಯಲ್ಲಿ ಹಲವಾರು ಬುರಡೇ ಪುರಾಣಗಳನ್ನ ಹಂಚಿಕೊಳ್ಳುತ್ತಾ, ಹೊಸಾ ಇಸ್ಪೀಟು ಆಟವನ್ನು ಕಲೆತು ಆಡುತ್ತಾ ಬಂದೆವು.
ಜಮ್ಮು ಪ್ರವಾಸ ಸಾಕಷ್ಟು ಹೊಸ ಅನುಭವಗಳನ್ನ, ಕಲಿಕೆಯನ್ನ, ಸ್ಪೂರ್ಥಿಯನ್ನ ತುಂಬಿದೆ. ಮನಸಿಗೆ ತುಂಬ ಹತ್ತಿರವಾದ ಪ್ರವಾಸವಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ