ಈ ಪ್ರಶ್ನೆಯನ್ನು ನಾವು ಹಲವು ಬಾರಿ, ಹಲವಾರು ಸಂದರ್ಭಗಳಲ್ಲಿ ಬಳಸಿದ್ದೀವಿ. ಭಾಷೆಯ ಸೊಗಡೆ ಅದು, ಒಂದೇ ಪದ ಅಥವ ಗುಚ್ಛವನ್ನ ಹಲವು ಸಂದರ್ಭಗಳಲ್ಲಿ ಬಳಸಬಹುದು. ಅದರ ಅರ್ಥ ಸಾಂದರ್ಭಿಕವಾಗಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೆ. ಅರ್ಥವೆಂದರೆ ’ಒಳಾರ್ಥ’ವೆಂದು ಅರ್ಥೈಸಿಕೊಳ್ಳಬೇಕು. ಮತ್ತೊಂದು ಗಮನಾರ್ಹ ವಿಷಯವೆಂದರೆ, ನಮ್ಮ ಶಾರೀರಿಕ ಹಾಗು ಶಾರೀರದಲ್ಲಿನ ಬದಲಾವಣೆಗಳು. ನಾನು ಇಲ್ಲಿ ಮನೋವಿಜ್ಞಾನ ಮಾತನಾಡ್ತಿಲ್ಲ. ಈ ಸೂಕ್ಷ್ಮತೆ , ಅಂದರೆ ಪದ/ವಾಕ್ಯದ ಸಾಂದರ್ಭಿಕ ಬಳಿಕೆ ಹಾಗು ಅದಕ್ಕನುಗುಣವಾಗಿ ಬದಲಾಗುವ ನಮ್ಮ ಶೈಲಿ, ನಾವು ಹೇಗೆ ಮರೆತುಹೊಗುತ್ತೇವೆ ಎಂಬ ಚಿಕ್ಕ ಸೂಚನೆ.
"ಇಷ್ಟೇನಾ?" ಎಂಬ ಪ್ರಶ್ನೆಯು ತುಂಬಾ ಸೂಕ್ಷ್ಮವಾದದ್ದು. ಇದು ಬಹಳ ಬಳಕೆಯಾಗುತ್ತದೆ ನಿಜ, ಆದರೆ ಅದರಲ್ಲೇನಿದೆ ಸೂಕ್ಷ್ಮತೆ ಎಂಬ ಸಂದೇಹ ನಿಮಗಿರಬಹುದು. ಅದು ಸಹಜವೇ ಸರಿ. ನನ್ನ ಅಂತರಾಳದಲ್ಲಿ ಅದರ ಸೂಕ್ಷ್ಮತೆಯನ್ನು ನಾನು ಹೇಗೆ ಅರ್ಥೈಸಿಕೊಂಡಿದ್ದೇನೆ ಎಂದು ನಿಮಗೆ ಮುಂದೇ ತಿಳಿಯುತ್ತದೆ. ಈ ಪದವಲ್ಲದೆ ನಾವು ಸಾಮಾನ್ಯವಾಗಿ " ಅಷ್ಟೇನಾ?" ಎಂಬ ಪದವನ್ನೂ ಸಹ ಬಳೆಸುತ್ತೇವೆ. ಈ ಎರಡೂ ಪದಗಳು ಸಾಂದರ್ಭಿಕವಾಗಿ ಒಂದೇ ಅರ್ಥ ಕೊಡಬಹುದು.
ಒಬ್ಬ ಗೃಹಿಣಿ ತರಕಾರಿ ಮಳಿಗೆಗೆ ಹೋಗಿ ಅಲಿದ್ದ ನಾಲ್ಕೇ ನಾಲ್ಕು ತರಕಾರಿಗಳನ್ನು ಕಂಡು ಮಳಿಗೆಯ ಮಾಲೀಕನ ಬಳಿ ಕೇಳುವ ಪ್ರಶ್ನೆಯೂ ಇದೆ, ಒಬ್ಬ ಸಾಹುಕಾರ ಆಭರಣದ ಅಂಗಡಿಯಲ್ಲಿ ಕುಳಿತು ಹೆಂಡತಿಯ ಉಡುಗೊರೆ-ಆಭರಣದ ಬೆಲೆ ವಿಚಾರಿಸಿ ಕೇಳುವ ಪ್ರಶ್ನೆಯೂ ಇದೆ, ಒಬ್ಬ ವಿದ್ಯಾರ್ಥಿ ಶಾಲೆ ಘೋಷಿಸಿದ ರಜಾ ದಿನಗಳನ್ನು ಕುರಿತು ಕೇಳುವ ಪ್ರಶ್ನೆಯೂ ಇದೆ, ಒಬ್ಬ ಕಾರ್ಮಿಕ ತನ್ನ ತಿಂಗಳ ಸಂಬಳ ತಂದು ತನ್ನ ಹೆಂಡತಿಗೆ ಕೊಟ್ಟಾಗ ಆಕೆ ಕೇಳುವ ಪ್ರಶ್ನೆಯೂ ಇದೆ, ಒಬ್ಬ ವ್ಯಾಪಾರಿ ದಿನ ಪೂರ್ತಿ ಗಿರಾಕಿ ಸಿಗದೆ ಸಂಜೆ ಮನೆಗೆ ಹೊರಡುತ್ತ ಕೇಳುವ ಪ್ರಶ್ನೆಯೂ ಇದೆ, ಒಬ್ಬ ರಾಜಕಾರಣಿ ಕದ್ದುಮುಚ್ಚಿ ಅವ್ಯವಹಾರಗಳನ್ನು ಮಾಡಿ ಆತನ ತಿಜೋರಿ ಕಂಡು ಕೇಳುವ ಪ್ರಶ್ನೆಯೂ ಇದೆ, ಒಬ್ಬ ಭಿಕ್ಷುಕ ದಿನಾಂತ್ಯದಲ್ಲಿ ತನ್ನ ಬೊಗಸೆ ಕಂಡು ಕೇಳುವ ಪ್ರಶ್ನೆಯೂ ಇದೆ, ಒಬ್ಬ ವೈರಾಗಿ ಮೇಲೆ ಹೇಳಿದ ಎಲ್ಲ ವಿಷಯಗಳನ್ನು, ಲೌಕಿಕ ಜಗತನ್ನು ಗಮನಿಸುತ್ತಾ ತನ್ನೊಳಗೆ ತಾನು ನಕ್ಕುತ್ತಾ ಕೇಳುವ ಪ್ರಶ್ನೆಯೂ ಇದೆ.
ಎಷ್ಟು ವಿಚಿತ್ರ ಅಲ್ಲವೇ??? ಇನ್ನು ಹಲವು ಸಂದರ್ಭಗಳ ಉದಾಹರಣೆ ಕೊಡಬಹುದು. ಆದರೆ ನನಗೆ ತುಂಬ ಇಷ್ಟವದದ್ದು ಇಲ್ಲಿದೆ , ಯಾಕೆಂದು ಇಲ್ಲಿಯವರೆಗು ತಿಳಿದಿಲ್ಲ, ತಿಳೆದುಕೊಳ್ಳುವ ಪ್ರಯತ್ನವೂ ಮಾಡಲಿಲ್ಲ. ದಿನಂಪ್ರತಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ, ಹಲವು ಸಂಬಂಧಗಳನ್ನು ಬೆಳೆಸಿಕೊಳ್ಳೂತ್ತೇವೆ, ಹಲವನ್ನು ಕಳೆದುಕೋಳ್ಳೂತ್ತೇವೆ, ತಿಳಿದೋ ತಿಳಿದೆಯೋ ತಪ್ಪು ಮಾಡಿ ಅದಕ್ಕೆ ಸಮಜಾಯಿಶಿ ಕೊಡುತ್ತೇವೆ, ಇನ್ನು ಹಲವು ಕೆಲಸಗಳನ್ನು ಬೇಕೋ ಬೇಡವೋ ಎಂದು ತರ್ಕಿಸದೆ ಮಾಡುತ್ತೇವೆ. ಕೊನೆಗೆ ಒಂದು ದಿವಸ ಜೀವನದಲ್ಲಿ ಏನನ್ನೂ ಸಾಧಿಸದೆ ಕಣ್ಣು ಮುಚ್ಚುತ್ತೇವೆ. ಈ ಪ್ರಪಂಚದಲ್ಲಿ ಈ ಹೆಸರಿನ ಒಂದು ಪ್ರಾಣಿ ಇತ್ತು ಎಂಬ ಸುಳಿವಿಲ್ಲದೆ ಕಾಣೆಯಾಗುತ್ತೇವೆ. ಕೊನೆಗೆ "ಇಷ್ಟೇನಾ?"!!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ