ಶುಕ್ರವಾರ, ಜೂನ್ 11, 2010

ಯೋಗಾಭ್ಯಾಸ

ನಮ್ಮ ಕಾಲೇಜಿನವರು ವಿಧ್ಯಾರ್ಥಿಗಳಿಗೆ ಉಪಯೋಗವಾಗಲಿಯೆಂದು ಯೋಗ, ಧ್ಯಾನ, ಪ್ರಾಣಾಯಾಮ ಹಾಗು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ವಿಷಯಗಳನ್ನು ಒಳಗೊಂಡ ಮೈಂಡ್ ಮ್ಯಾನೇಜ್ಮೆಂಟ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ಎಂಬ ಒಂದು ವಿಷಯವನ್ನು ನಮ್ಮ ಪಠ್ಯ ವಿಷಯಗಳ ಜೊತೆಗೆ ಸೇರಿಸಿದ್ದಾರೆ. ಒಳ್ಳೆಯ ವಿಷಯವಾದರೂ, ಯಾರು ಅದಕ್ಕೆ ಹೆಚ್ಚು ಮಾನ್ಯತೆ ಕೊಟ್ಟಿದ್ದನ್ನು ನಾನಂತು ನೋಡಿಲ್ಲ.....ಇರಲಿ ನಾವು ಪಿ.ಸಿ.ಎಮ್ ಹುಡುಗುರು ತುಂಬಾ ಬುದ್ಧಿವಂತರಾದ್ದರಿಂದ ಈ ವಿಷಯಕ್ಕೆ ಸ್ವಲ್ಪ ಮಾನ್ಯತೆ ಕೊಟ್ಟು ಬೇರೆ ವಿಷಯಗಳ ಹಾಗೆ ನಮ್ಮ ಪರಿಪೂರ್ಣ ಪರಿಶ್ರಮ ಹಾಕೋಣ ಅಂತ ಅಂದುಕೊಂಡೆವು.
ನಮ್ಮ ಅದೃಷ್ಟವೆಂದರೆ ನಮ್ಮ ಸಹಪಾಠಿಯಾದ ಕುಸುಮಾಳ ತಾಯಿ ಯೋಗ ಹೇಳಿಕೊಡ್ತಾರೆ. ಹಾಗಾಗಿ ನಾವೆಲ್ಲರು ಅವಳ ಮನೆಗೆ ಹೋಗಿ ನಮ್ಮ ಪರೀಕ್ಷೆಗೆ ಬೇಕಾದ ಯೋಗಾಸನಗಳನ್ನ ಒಂದು ಸಲ ಮಾಡಿಯೇಬಿಡೋಣವೆಂದು ಹೋಗಿದ್ದೆವು. ಸರಿ ಅಕ್ಷಯಾಳಿಗೆ ದಾರಿ ತಿಳಿದಿದೆಯೆಂದು ತಪ್ಪಾಗಿ ಭಾವಿಸಿ ಜಯನಗರವೆಲ್ಲಾ ಒಂದು ಸುತ್ತುಹೊಡೆದು ಕೊನೆಗೆ ಅಶೋಕ ಸ್ಥಂಭದ ಹತ್ತಿರವಿರುವ ಅವಳ ಮನೆಗೆ ಹೋದೆವು..
ಅಲ್ಲಿ ಸಾಂಗವಾಗಿ ನಮಗಿದ್ದ ಎಲ್ಲ ಆಸನಗಳನ್ನು ಒಂದೆರಡು ಸಾರಿ ಕಲಿತೆವು.
ಮಜವೆಂದರೆ ನಾಗೆಂದ್ರ ಮತ್ತೆ ಕೌಶಿಕ್  ಕುಸುಮ ಮಾಡುತ್ತಿದ್ದ ಆಸನಗಳನ್ನೆಲ್ಲ ತಮ್ಮ ತಮ್ಮ ಕ್ಯಾಮೆರ ಫೋನಿನಲ್ಲಿ ಸೆರೆಹಿಡಿದಿದ್ದು.. ಇಷ್ಟು ಸಾರ್ತಿ ಮಾಡಿದಳಲ್ಲ ಮತ್ತೆ ಚಿತ್ರಣ ಯಾಕೆ ಅಂತ ಪ್ರಶ್ನಿಸಿದಕ್ಕೆ ಸಿಕ್ಕ ಉತ್ತರ " ಮನೆಗೆ ಹೋಗಿ ಎಷ್ಟು ಸಲ ಸಾಧ್ಯವೊ ಅಷ್ಟು ಸಲ ನೋಡಿ ಆಸನಗಳನ್ನ ಕರಗತ ಮಾಡ್ಕೊಬೇಕು"..ಕೇಳಿ ಎಲ್ಲರೂ ಆದಷ್ಟು ಜೋರಾಗಿ ನಕ್ಕು ಊಟಕ್ಕೆ ಹೊದೆವು..
ಆವತ್ತಿನ ದಿನ ಏಕಾದಶಿ, ನಮ್ಮ ಜೊತೆ ಬಂದಿದ್ದ ವಿರಜ ಒಂದು ಹನಿ ನೀರನ್ನೂ ಮುಟ್ಟಲಿಲ್ಲ..ಅವಳ ಅದೃಷ್ಟಕ್ಕೆ ಕುಸುಮಾಳ ತಾಯಿ ಈರುಳ್ಳಿ ಟೊಮಾಟೋ ಗೊಜ್ಜು ಮಾಡಿ ಚಪಾತಿ ಹಾಗು ಅನ್ನ ಸಾರನ್ನ ಮಾಡಿದ್ದರು.. ಅಂತು ಇಂತು ಬೈದು ಅವಳಿಗೆ ಮಾಜಾ ಕುಡಿಸಿ ನಾವುಗಳು ಊಟ ಮಾಡಿಕೊಂಡು ವಾಪಸ್ಸು ಬಂದೆವು..
ಮಾರನೇ ದಿವಸ ಕಾಲೇಜಿಗೆ ಹೋಗಿ ಎಲ್ಲರೂ ಅತ್ಯುತ್ತಮವಾಗಿ ಆಸನಗಳನ್ನು ಮಾಡಿದೆವು...

2 ಕಾಮೆಂಟ್‌ಗಳು: